ಕರ್ನಾಟಕ

ಮಹಾಮಾರಿಯಾಗಿ ಕಾಡುತ್ತಿರುವ ಡೆಂಘೀಗೆ ಆಯುರ್ವೇದ ರಾಮಬಾಣ

Pinterest LinkedIn Tumblr

eleಬೆಂಗಳೂರು, ಸೆ.19- ನಗರವನ್ನು ಕಾಡುತ್ತಿರುವ ಮಹಾಮಾರಿ ಡೆಂಘೀಗೆ ಅಲೋ ಪಥಿಗಿಂತ ಆಯುರ್ವೇದಿಕ್ ಔಷಧಿಯೇ ಸೂಕ್ತ.  ನಮ್ಮಲ್ಲೇ ಲಭ್ಯವಿರುವ ಅಮೃತಬಳ್ಳಿ, ಲೋಳೆಸರ, ಪಪ್ಪಾಯಿ ಎಲೆ ಮತ್ತು ದಾಳಿಂಬೆ ಮುಂತಾದವುಗಳ ಹಣ್ಣಿನ ರಸ ಸೇವಿಸುವುದರಿಂದ ಮಾನವನ ದೇಹದಲ್ಲಿರುವ ರಕ್ತ ಕಣಗಳು ಹೆಚ್ಚುವುದರ ಜೊತೆಗೆ  ರೋಗನಿರೋಧಕ ಶಕ್ತಿ  ಹೆಚ್ಚಿಸುತ್ತದೆ.  ಇದರಿಂದ ಡೆಂಘೀಯಂತಹ ಮಹಾಮಾರಿಯನ್ನು ನಿಯಂತ್ರಿಸಬಹುದಾಗಿದೆ. ಅಲೋಪಥಿ ಔಷಧಿಗಳಿಗಿಂತ ಆಯುರ್ವೇದದಲ್ಲಿರುವ ಚಿಕಿತ್ಸಾ ಕ್ರಮಗಳೇ ಈ ಕಾಯಿಲೆಗೆ ಉತ್ತಮ ಮದ್ದು. ಹಸು ಮತ್ತು ಮೇಕೆ ಹಾಲನ್ನು ಹೆಚ್ಚಾಗಿ  ಸೇವಿಸುವುದರಿಂದಲೂ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಡೆಂಘೀಯಂತಹ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ.

ಡೆಂಘೀ ಮಾರಕ ಕಾಯಿಲೆಗೆ ತುತ್ತಾಗಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಮತ್ತಷ್ಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಹದಲ್ಲಿ ಬಿಳಿಯ ರಕ್ತಕಣ ಕಡಿಮೆಯಾಗಿ  ಅವು ದೊರೆಯದೆ ಸಂಕಷ್ಟಕ್ಕೀಡಾಗಿ ರೋಗಿಗಳು ಸಾವಿಗೀಡಾಗುವ ಪರಿಸ್ಥಿತಿ  ನಿರ್ಮಾಣವಾಗುತ್ತಿದೆ. ಅದಕ್ಕಾಗಿ ಜನ ತಮ್ಮಲ್ಲೇ ದೊರೆಯುವ ಲೋಳೆರಸ, ದಾಳಿಂಬೆ, ಪಪ್ಪಾಯಿ ಎಲೆ ರಸಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಈ ರೋಗ ನಿಯಂತ್ರಿಸಬಹುದಾಗಿದೆ.

ಅಲ್ಲದೆ ಹಸು ಮತ್ತು ಮೇಕೆ ಹಾಲು ಸೇವಿಸುವುದರಿಂದಲೂ ಈ ರೋಗ ಬರದಂತೆ ತಡೆಯಬಹುದು ಎಂದು ಆಯುರ್ವೇದಿಕ್ ಚಿಕಿತ್ಸಾ ಪದ್ಧತಿಯಲ್ಲಿ ಉಲ್ಲೇಖವಿದೆ. ಈ ಕಾಯಿಲೆಗೆ ಅಲೋಪಥಿಗಿಂತ  ಆಯುರ್ವೇದಿಕ್ ಪದ್ಧತಿಯೇ ಸೂಕ್ತ.

Write A Comment