ಕರ್ನಾಟಕ

ದುಷ್ಕರ್ಮಿಯ ಗುಂಡಿನ ದಾಳಿಗೆ ಬಲಿಯಾದ ಸಾಹಿತಿ ಎಂ.ಎಂ ಕಲಬುರ್ಗಿ: ಮನೆಗೆ ನುಗ್ಗಿದ ದುಷ್ಮರ್ಮಿಗಳಿಂದ ಏಕಾಏಕಿ ಗುಂಡಿನ ದಾಳಿ

Pinterest LinkedIn Tumblr

kalaburgi

ಧಾರವಾಡ: ಹಿರಿಯ ಸಂಶೋಧಕ ಹಾಗೂ ಸಾಹಿತಿ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಅಪರಿಚಿತ ದುಷ್ಕರ್ಮಿಯೊಬ್ಬ ಭಾನುವಾರ ಬೆಳಿಗ್ಗೆ ಇಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಈ ಅನಿರೀಕ್ಷಿತ ಘಟನೆಯಿಂದ ಕನ್ನಡ ಸಾರಸ್ವತ ಲೋಕ ಆಘಾತಗೊಂಡಿದೆ.

ಘಟನೆ ವಿವರ: ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಧಾರವಾಡದ ಕಲ್ಯಾಣ ನಗರದಲ್ಲಿರುವ ಕಲಬುರ್ಗಿ ಅವರ ನಿವಾಸಕ್ಕೆ ಬೆಳಿಗ್ಗೆ 8:30 ರ ಸುಮಾರಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮನೆಯ ಕರೆಗಂಟೆ ಒತ್ತುತ್ತಾರೆ. ಸ್ವತಃ ಕಲಬುರ್ಗಿ ಅವರೇ ಮನೆಯ ಬಾಗಿಲು ತೆರೆದು ಒಳಬರುವಂತೆ ಸೂಚಿಸಿ, ಒಳಗಡೆ ಹೋಗುತ್ತಾರೆ.

ಆದರೆ, ಬಂದಿರುವ ಅಪರಿಚಿತ ವ್ಯಕ್ತಿ ಮನೆಯ ಒಳಗೆ ಬರದೆ, ಹೊರಗೆ ಬಾಗಿಲಲ್ಲೇ ನಿಲ್ಲುತ್ತಾರೆ. ಕೆಲವು ಕ್ಷಣಗಳ ನಂತರ ಬಂದಿರುವ ವ್ಯಕ್ತಿ ಸರ್‌, ಸರ್‌ ಎಂದು ಕರೆಯುತ್ತಿರುವುದನ್ನು ಕೇಳಿಸಿಕೊಂಡ ಕಲಬುರ್ಗಿ ಅವರ ಪತ್ನಿ, ಪತಿಗೆ ಬಂದ ವ್ಯಕ್ತಿ ಒಳಗೆ ಬಾರದೆ ಹೊರಗೇ ನಿಂತಿದ್ದಾರೆ. ಯಾರಂತ ಹೋಗಿ ವಿಚಾರಿಸಿ ಎಂದು ಹೇಳಿದ್ದಾರೆ. ಕಲಬುರ್ಗಿ ಅವರು ಎದ್ದು ಹೊರಗೆ ಹೋದ ಮರು ಕ್ಷಣವೇ ಗುಂಡಿನ ಸದ್ದು ಕೇಳಿಸಿದೆ. ಆಘಾತಗೊಂಡ ಪತ್ನಿ ಹೊರಗೆ ಓಡಿ ಬರುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸ್ಥಳಕ್ಕೆ ಧಾರವಾಡ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಂಶೋಧನೆ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ್ದ ಕಲಬುರ್ಗಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿದ್ದರು. ಇವರು ಬರೆದ ‘ಮಾರ್ಗ’ ಕೃತಿ ಭಾರಿ ವಿವಾದಕ್ಕೆ ಗುರಿಯಾಗಿತ್ತು.

Write A Comment