2-3 ಮಾವಿನಕಾಯಿ
ಒಂದು ಕಪ್ ಕಲ್ಲು ಉಪ್ಪು
ಒಂದೂವರೆ ಕಪ್ ಬ್ಯಾಡಗಿ ಮೆಣಸು ಅಥವಾ ಮೆಣಸಿನ ಪುಡಿ
5 ಚಮಚ ಸಾಸಿವೆ
ಸ್ವಲ್ಪ ಹಳದಿ
ಮಾಡುವ ವಿಧಾನ:
ಮಾವಿನಕಾಯಿಯನ್ನು ಬಟ್ಟೆಯೊಂದರಲ್ಲಿ ಉಜ್ಜಿಕೊಂಡು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅದಕ್ಕೆ ಉಪ್ಪು ಬೆರೆಸಿ ಒಂದು ಪಾತ್ರೆಯಲ್ಲಿ ಹಾಕಿಡಿ.
ಎರಡು-ಮೂರು ದಿನ ಕಳೆದ ನಂತರ ಒಂದು ಕಣ್ಣು ಪಾತ್ರೆಯಲ್ಲಿ ಮಾವಿನಕಾಯಿ ಹಾಕಿ ಅದರಿಂದ ಉಪ್ಪು ನೀರನ್ನು ಸೋಸಿಕೊಳ್ಳಿ.
ಮೆಣಸು ಹಾಗೂ ಸಾಸಿವೆಯನ್ನು ಪ್ರತ್ಯೇಕವಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು.ಅದನ್ನು ಒಟ್ಟು ಮಾಡಿ ಹಳದಿಯನ್ನೂ ಸೇರಿಸಿ.
ಒಲೆಯಲ್ಲಿ ಉಪ್ಪು ನೀರು ತಯಾರಿಸಿಕೊಂಡು ಅದು ತಣಿದ ನಂತರ ಮೆಣಸು, ಸಾಸಿವೆ ಹಾಗೂ ಹಳದಿ ಮಿಶ್ರಣಕ್ಕೆ ಸೇರಿಸಿ. ಆಗ ಉಪ್ಪಿನಕಾಯಿ ಮಸಾಲೆ ಸಿದ್ದವಾಗುತ್ತದೆ.
ನಂತರ ಇದಕ್ಕೆ ಮಾವಿನಕಾಯಿಯನ್ನು ಬೆರೆಸಿದಾಗ ಉಪ್ಪಿನಕಾಯಿ ಸಿದ್ದ. ಉಪ್ಪಿನಕಾಯಿ ತಯಾರಿಸುವ ಸಂದರ್ಭದಲ್ಲಾಗಲಿ, ಅದನ್ನು ಹಾಕಿಡುವ ವೇಳೆ, ಪಾತ್ರೆಯಲ್ಲಾಗಲಿ ನೀರು ಇರಬಾರದು. ನೀರು ಬಿದ್ದರೆ ಉಪ್ಪಿನಕಾಯಿ ಹಾಳಾಗುತ್ತದೆ. ಸ್ವಲ್ಪ ದಿನಗಳು ಕಳೆದ ನಂತರ ತಿನ್ನಲು ಬಳಸಿ.