ಕರ್ನಾಟಕ

ಕಲಬುರಗಿ ಇಬ್ಬರು ರೈತರ ಆತ್ಮಹತ್ಯೆ

Pinterest LinkedIn Tumblr

suಅಫಜಲಪುರ: ಕಲಬುರುಗಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಅಫಜಲಪುರ ತಾಲೂಕಿನ ಅವರಳ್ಳಿ ಗ್ರಾಮದಲ್ಲಿ ರೈತ ಪ್ರಶಾಂತ್‌ ಪಾಟೀಲ್‌ (37) ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗೊಬ್ಬುರು ಗ್ರಾಮದ ಪ್ರಗತಿ ಕೃಷ್ಣಾ ಬ್ಯಾಂಕ್ ಸೇರಿದಂತೆ ನಾನಾಕಡೆಗಳಲ್ಲಿ ಪ್ರಶಾಂತ್‌ ಪಾಟೀಲ್‌, ಒಂದೂವರೆ ಲಕ್ಷ ರೂ. ಸಾಲ ಮಾಡಿದ್ದ. ಸಾಲ ತೀರಿಸಲು 10 ಎಕರೆ ಜಮೀನಿನಲ್ಲಿ 3 ಎಕರೆ ಜಮೀನು ಮಾರಾಟ ಮಾಡಿದ್ದ. ಆದರೆ, ಸಾಲ ತೀರದ ಹಿನ್ನಲೆಯಲ್ಲಿ ಜಿಗುಪ್ಸೆಗೊಂಡು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಕ್ರಿಮಿನಾಶಕ ಸೇವಿಸಿ ರೈತ ಅಣ್ಣಪ್ಪ (55) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಲ್ಲೆಯ ಚಂಚೋಳಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಹುಮನಾಬಾದ್‌ಗೆ ತೆರಳುವಾಗ ಮಾರ್ಗ ಮಧ್ಯೆ ಅಣ್ಣಪ್ಪ ಕೊನೆಯುಸಿರೆಳೆದಿದ್ದಾನೆ. ಪಿಎಲ್‌ಡಿ ಬ್ಯಾಂಕಿನಲ್ಲಿ 50 ಸಾವಿರ ರೂ. ಸಾಲ ಸೇರಿ, ಅಣ್ಣಪ್ಪ 3 ಲಕ್ಷ ರೂ. ಸಾಲ ಮಾಡಿದ್ದ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Write A Comment