ಹೊಸದಿಲ್ಲಿ: ಸಿಐಎ, ಎಫ್‌ಬಿಐ, ನಾಸಾ ಹಾಗೂ ಪಾಕಿಸ್ತಾನ ಸೇನೆಯನ್ನು ಹಿಂದಿಕ್ಕಿರುವ ಭಾರತೀಯ ಸೇನೆಯ ಜನಪ್ರಿಯತೆ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮೊದಲ ಸ್ಥಾನ ತಲುಪಿದೆ.
ಕಳೆದೆರಡು ತಿಂಗಳಲ್ಲಿ ಫೇಸ್‌ಬುಕ್ ಪೇಜ್‌ನಲ್ಲಿ ‘ಪೀಪಲ್ ಟಾಕಿಂಗ್ ಎಬೌಟ್ ದಟ್ (ಪಿಟಿಪಿಟಿ)’ ನಲ್ಲಿ ಭಾರತೀಯ ಸೇನೆಗೆ ಎರಡನೇ ಬಾರಿ ಮೊದಲ ಸ್ಥಾನ ದಕ್ಕಿದೆ.
‘ಭಾರತೀಯ ಸೇನೆಯನ್ನು ಇಷ್ಟಪಡುವ ನೈಜ ಅಭಿಮಾನಿಗಳಿದ್ದಾರೆ ಎಂಬುವುದು ಇದರಿಂದ ಸಾಬೀತಾಗುತ್ತದೆ,’ ಎಂದು ಭಾರತೀಯ ಸೇನೆಯ ಮೂಲಗಳು ಸ್ಪಷ್ಟಪಡಿಸಿವೆ.
ಒಂದು ಪೇಜ್ ಬಗ್ಗೆ ಜನರು ಮಾತನಾಡಿಕೊಳ್ಳುವುದನ್ನು ಪಿಟಿಎಟಿ ರ‍್ಯಾಂಕಿಂಗ್ ಎನ್ನುತ್ತಾರೆ. ಬರೀ ಫೇಸ್‌ಬುಕ್‌ನಲ್ಲಿ ಮಾತ್ರವಲ್ಲ, ಸೇನೆಯ ಅಧಿಕೃತ ವೆಬ್‌ಸೈಟ್ ಅನ್ನು ವಾರದಲ್ಲಿ ಸುಮಾರು 25 ಲಕ್ಷ ಮಂದಿ ಲೈಕ್ ಮಾಡುತ್ತಾರೆ.
ಜುಲೈ 1, 2013ರಂದು ಸೇನೆ ಫೇಸ್‌ಬುಕ್‌ಗೆ ಪ್ರವೇಶಿಸಿದ್ದು, ಅಲ್ಲಿಂದ ಸುಮಾರು 2.9 ಕೋಟಿ ಮಂದಿ ಈ ಪುಟವನ್ನು ಲೈಕ್ ಮಾಡಿದ್ದಾರೆ.
ಮತ್ತೊಂದು ಆಸಕ್ತಿಕರ ವಿಷಯವೆಂದರೆ ಫೇಸ್‌ಬುಕ್‌ನಲ್ಲಿಯೂ ಪಾಕಿಸ್ತಾನ, ಭಾರತದ ಕದನ ನಡೆಯುತ್ತಿದ್ದು, ಪಾಕ್ ಸೇನೆ ಪುಟವನ್ನು ಭಾರತದಲ್ಲಿ, ಭಾರತೀಯ ಸೇನೆ ಪುಟವನ್ನು ಪಾಕಿಸ್ತಾನದಲ್ಲಿ ಬ್ಲಾಕ್ ಮಾಡಲಾಗಿದೆ.