ಭದ್ರಾವತಿ: ಸಾಮಾಜಿಕ ಜಾಲ ತಾಣ ವಾಟ್ಸ್ ಆಪ್ ನಲ್ಲಿ ಅಶ್ಲೀಲ ಸಂದೇಶ ಕಳಿಸುತ್ತಿದ್ದ ವಿದ್ಯಾರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತಾ..?
ವಿದ್ಯಾರ್ಥಿನಿಯರಿಗೆ ವಾಟ್ಸ್ ಅಪ್ ನಲ್ಲಿ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಭದ್ರಾವತಿ ಜೇಡಿಕಟ್ಟೆ ಕಾಲೇಜೊಂದರ ವಿದ್ಯಾರ್ಥಿ ಧನುಷ್ ಬಂಧಿತ ಅರೋಪಿ. ಧನುಷ್ ವಿದ್ಯಾರ್ಥಿನಿಯರಿಗೆ ಹಾಗೂ ಕಾಲೇಜಿನ ಮಹಿಳಾ ಸಿಬ್ಬಂದಿಗಳಿಗೆ ವಾಟ್ಸ್ ಆಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿರುವ ಬಗ್ಗೆ ಕಾಲೇಜಿನ ಪ್ರಾಚಾರ್ಯರು ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ. ಚನ್ನಣ್ಣನವರ್ ಸ್ಥಳೀಯ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಅದರಂತೆ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಧನುಷ್ ನನ್ನು ಈಗ ಬಂಧಿಸಿದ್ದಾರೆ. ಅತನ ವಿರುದ್ದ ಸೆಕ್ಷನ್ 354 (ಎ) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.