ಕೋಲ್ಕತ್ತಾದ ತಲ ಜೀಲ್ ಪಾರ್ಕ್ ಬಳಿ ಕಚ್ಚಾ ಬಾಂಬ್ ಒಂದು ಸ್ಪೋಟಗೊಂಡಿದ್ದು ನಾಲ್ಕು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ನಾಲ್ಕು ವರ್ಷದ ಮಗು ಮನೆಯ ಬಳಿಯಿದ್ದ ಉದ್ಯಾನವನದ ಬಳಿ ಆಟವಾಡುತ್ತಿತ್ತು. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಬಾಂಬ್ ಸ್ಪೋಟಗೊಂಡಿದ್ದು ಪರಿಣಾಮ ಸ್ಥಳದಲ್ಲಿದ್ದ ಮಗು ಗಂಭೀರವಾಗಿ ಗಾಯಗೊಂಡಿದೆ.ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದು, ತಪಾಸಣೆ ವೇಳೆ ಮತ್ತೆರಡು ನಾಡ ಬಾಂಬ್ ಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.