ಕರ್ನಾಟಕ

‘ಸುಖಶಾಂತಿ’ ಲಾಡ್ಜ್ ನಲ್ಲಿ ಪತ್ತೆಯಾಯ್ತು ‘ವೇಶ್ಯಾವಾಟಿಕೆ’ ದಂಧೆ !

Pinterest LinkedIn Tumblr

lodgeಬೆಳಗಾವಿ ಇತ್ತೀಚೆಗೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಇಲ್ಲಿನ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಖಾನಾಪುರ ರಸ್ತೆಯಲ್ಲಿಸುವ ಸುಖ ಶಾಂತಿ ಲಾಡ್ಜ್ ನಲ್ಲಿ ಈ ಮಾಂಸ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದು ಈ ಸಮಯದಲ್ಲಿ ಇಬ್ಬರು ಯುವಕರು ಹಾಗೂ ಗೋವಾ ಮೂಲದ ಮಧ್ಯವರ್ತಿ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಲ್ಲದೇ ಈ ಸಮಯದಲ್ಲಿ ಗೋವಾ ಮೂಲದ ಒಬ್ಬ  ಯುವತಿ  ಹಾಗೂ ಮುಂಬೈನ  ಯುವತಿಯೊಬ್ಬಳನ್ನು  ರಕ್ಷಿಸಲಾಗಿದ್ದು ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ

Write A Comment