ಕರ್ನಾಟಕ

ಕಲ್ಪತರು ನಾಡು ತುಮಕೂರಲ್ಲಿ ತಾಜ್ಮಹಲ್

Pinterest LinkedIn Tumblr

tuತುಮಕೂರು ನಗರದ ಗುಬ್ಬಿ ರಿಂಗ್ ರೋಡ್‌ನ ಧಾನಾ ಪ್ಯಾಲೇಸ್ ಮುಂಭಾಗದಲ್ಲಿ ತಾಜ್ ಮಹಲ್ ಮಾದರಿಯ ಕಲಾಕೃತಿ ನಿರ್ಮಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಜಗತ್ತಿನ ಏಳನೇ ಅದ್ಬುತಗಳಲ್ಲಿ ಒಂದಾದ ಆಗ್ರಾದ ಪ್ರೇಮ ಸೌಧ ತಾಜ್‌ಮಹಲ್ ರೂಪದಲ್ಲಿ ಸಿದ್ದಗಂಗಾ ತಾಜ್ ಮಹಲ್ ಹೆಸರಿನ ವಸ್ತುಪ್ರದರ್ಶನ ಆರಂಭಗೊಂಡಿದೆ.

ಸಂಚಾರಿ ವಸ್ತುಪ್ರದರ್ಶನಗಳಲ್ಲಿ ಹೆಸರು ಮಾಡಿರುವ ಕೋಲಾರದ ದಿವಾಕರ ಎಂಬುವವರು ಈ ಪ್ರತಿಕೃತಿ ನಿರ್ಮಾಣದ ಮೂಲಕತೃಗಳಾಗಿದ್ದು, ಇವರೊಂದಿಗೆ ತುಮಕೂರಿನ ಜಮೀರ್ ಅಹಮದ್, ಸರಮದ್, ನಾಸೀರ್ ಎಂಬುವವರು ಕೈಜೊಡಿಸಿದ್ದು, ಕಲಾವಿದ ನವೀದ್ ಪ್ಲೆವುಡ್, ಮರ ಹಾಗೂ ಕಬ್ಬಿಣದ ಸರಗಳುಗಳನ್ನು ಬಳಸಿ ಈ ಅದ್ಬುತ್ ಕಲಾಕೃತಿ ರಚಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅಮ್ಯೂಸೆಮೆಂಟ್ ಪಾರ್ಕ್ ಜತೆಗೆ ಸಾರ್ವಜನಿಕರಿಗೆ ತಾಜ್ ಮಹಲ್ ವೀಕ್ಷಣೆಗೆ ಅವಕಾಶ ಕಲ್ಪಿಸುವ ಕಾರ್ಯಕ್ಕೆ ಕೈಹಾಕಿದ್ದು, ಎರಡು ತಿಂಗಳಿನಿಂದ ಕಲಾಕೃತಿಯನ್ನು ಜೋಡಿಸುವ ಕೆಲಸ ನಡೆದಿದ್ದು, ದಿನವಹಿ 50 ಕಲಾವಿದರು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ನೋಡುಗರಿಗೆ ಇದೇ ನಿಜವಾದ ತಾಜ್ ಮಹಲ್ ಎಂಬಂತಹ ಭಾವನೆ ಬರುವಂತೆ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಇದಕ್ಕೆ ಒಂದು ಕೋಟಿಗೂ ಹೆಚ್ಚು ಖರ್ಚಾಗಿದೆ ಎಂದು ದಿವಾಕರ್ ತಿಳಿಸಿದ್ದಾರೆ. ಮುಂದಿನ ಎರಡು ತಿಂಗಳ ಕಾಲ ವಿವಿಧ ಮಳಿಗೆಗಳೊಂದಿಗೆ ಮಕ್ಕಳಿಗೆ ಆಟಿಕೆ ವಸ್ತುಗಳು, ಅಮ್ಯೂಸ್‌ಮೆಂಟ್ ಪಾರ್ಕ್ ಒಳಗೊಂಡ ಶ್ರೀಸಿದ್ದಗಂಗಾ ತಾಜ್ ಮಹಲ್ ವಸ್ತುಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 10 ಗಂಟೆಯವರಗೆ ಪ್ರವೇಶ ಶುಲ್ಕು ನೀಡಿ ವೀಕ್ಷಿಸಬಹುದಾಗಿದೆ.

ನಿನ್ನೆ ನಡೆದಾಡುವ ದೇವರು ಎಂದೇ ಪ್ರಸಿದ್ದವಾಗಿರುವ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರಸ್ವಾಮೀಜಿರ ಪಾದಪೂಜೆಯೊಂದಿಗೆ ಬೆಳ್ಳಗೆ 11.30 ಗಂಟೆಗೆ ಶ್ರೀ ಸಿದ್ದಗಂಗಾ ತಾಜ್ ಮಹಲ್ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದರು. ಸಂಜೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾ ಶ್ರೀಸಿದ್ದಲಿಂಗಮಹಾಸ್ವಾಮಿಗಳು, ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್, ಮೇಯರ್ ಲಲಿತಾ ರವೀಶ್, ಉಪಮೇಯರ್ ಎಂ.ಎನ್.ವೆಂಕಟೇಶ್, ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್, ಪಾಲಿಕೆ ಸದಸ್ಯರಾದ ನದೀಂ ಪಾಷ, ವಿರೋಧಪಕ್ಷದ ನಾಯಕ ಸುಧೀಶ್ವರ್, ಮಾಜಿ ನಗರಸಭಾ ಸದಸ್ಯ ಮಹಬೂಬ್ ಪಾಷ, ತಾ.ಪಂ.ಸದಸ್ಯ ಎ.ಂಬಿ.ಕುಮಾರ್, ತೀರ್ಥೇಶ್ ಮತ್ತಿತರರು ಉಪಸ್ಥಿತರಿದ್ದರು.

Write A Comment