ಕರ್ನಾಟಕ

ಬೆಂಗಳೂರಲ್ಲಿ ಧೂಳಿನ ಕಾಟದ ಆತಂಕ

Pinterest LinkedIn Tumblr

dust in bang

ಬೆಂಗಳೂರು,ಜು.20: ನಗರದಲ್ಲಿ ತೇಲುವ ಸಣ್ಣ ಸಣ್ಣ ಧೂಳಿನ ಕಣಗಳು ಅಪಾಯಕಾರಿ ಮಟ್ಟ ಮೀರಿ ಶೇ.283ರವರೆಗೂ ಅಧಿಕವಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್ ಅವರ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯ ಯೋಜನೆಯಡಿ ಟೆರ್ರಿ ಸಂಸ್ಥೆ ಬೆಂಗಳೂರಿನ 15 ಕಡೆ ಪರಿಸರ ಮಾಲಿನ್ಯದ ಮಾಪನ ನಡೆಸಿದೆ.

ಅದರ ಪ್ರಕಾರ ವೈಟ್‌ಫೀಲ್ಡ್ ಕೈಗಾರಿಕಾ ವಲಯದಲ್ಲಿ ಶೇ.283 ಮೈಸೂರು ರಸ್ತೆ ಅಮ್ಕೋ ಬ್ಯಾಟರೀಸ್ ಪ್ರದೇಶದಲ್ಲಿ ಶೇ.248 ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ 215ರಷ್ಟು ಪರಿಸರ ಮಾಲಿನ್ಯ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ನಿಯಮಾನುಸಾರ ಧೂಳಿನ ಕಣಗಳು ಪ್ರತಿ ಟನ್‌ಗೆ 60 ಕಣಗಳಿರಬೇಕು. ಆದರೆ ಇದು ಶೇ.12ರಿಂದ 283ರಷ್ಟು ಹೆಚ್ಚಿದೆ. ಗಂಧಕದ ಡೈಆಕ್ಸೈಡ್, ಸಾರಜನಕ ಡೈಆಕ್ಸೈಡ್ ರಾಷ್ಟ್ರೀಯ ಮಿತಿಯ ಪ್ರಮಾಣದೊಳಗಿದೆ. ಧೂಳಿನ ಕಣಗಳ ಮಾಲಿನ್ಯ ಮಾತ್ರ ಮಿತಿಮೀರಿದೆ. ಇದಕ್ಕೆ ವಾಹನ ದಟ್ಟಣೆ, ರಸ್ತೆಗಳ ದುಸ್ಥಿತಿ, ಬೃಹತ್ ಕಟ್ಟಡಗಳ ನಿರ್ಮಾಣ ಮೂಲ ಕಾರಣ ಎಂದು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಸಾರಿಗೆ ವಲಯದಿಂದ ಶೇ.42ರಷ್ಟು ರಸ್ತೆ ಧೂಳಿನಿಂದ ಶೇ.20ರಷ್ಟು ಕೈಗಾರಿಕೆ, ಕಟ್ಟಡದಿಂದ ತಲಾ ಶೇ.14ರಷ್ಟು ಜನರೇಟರ್‌ಗಳಿಮದ ಶೇ.7ರಷ್ಟು, ಗೃಹ ಬಳಕೆಯಿಂದ ಶೇ.3ರಷ್ಟು ಮಾಲಿನ್ಯವಾಗುತ್ತಿದೆ. ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಭಾರೀ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲು ಮುಂದಾಗಿದೆ ಎಂದರು.

Write A Comment