ಕರ್ನಾಟಕ

ಅವಿಶ್ವಾಸ ನಿರ್ಣಯ ಪ್ರತಿಪಕ್ಷಗಳಿಗಿರುವ ಅಸ್ತ್ರ : ಎಚ್‌ಡಿಕೆ

Pinterest LinkedIn Tumblr

HDK-umarswamy-56565468909ಬೆಂಗಳೂರು,ಜು.16-ಅವಿಶ್ವಾಸ ನಿರ್ಣಯ ಎಂಬುದು ಪ್ರತಿಪಕ್ಷಗಳಿಗೆ ಇರುವ ಒಂದು ಅಸ್ತ್ರ. ಇದನ್ನು ಬಳಸಿಕೊಂಡು ಸರ್ಕಾರ ಹಾಗೂ ಜನರ ಗಮನ ಸೆಳೆಯಲು ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಹೇಳಿದರು. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿ ಅವಿಶ್ವಾಸ ನಿರ್ಣಯದ ಮೇಲೆ  ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರವನ್ನು ಉರುಳಿಸಬಹುದು ಎಂಬ ಭ್ರಮೆಯಲ್ಲಿ ನಾವು ಅವಿಶ್ವಾಸ ನಿರ್ಣಯ ಮಂಡಿಸಿಲ್ಲ. ನಮ್ಮ ಪಕ್ಷದಲ್ಲಿ 40 ಮಂದಿ ಶಾಸಕರಿದ್ದಾರೆ. ಇದರಿಂದ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ ಸರ್ಕಾರದ ಆಡಳಿತ ವೈಫಲ್ಯ, ಸರ್ಕಾರದ ವಿರುದ್ದ ಬಂದಿರುವ ಆರೋಪಗಳು ಮತ್ತು ಹಗರಣಗಳ ಬಗ್ಗೆ ಚರ್ಚಿಸಲೇ ಬೇಕಾಗಿದೆ. ಅದಕ್ಕಾಗಿ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ ಎಂದು ಹೇಳಿದರು. ಸರ್ಕಾರ ಹಾಗೂ ಜನರ ಗಮನ ಸೆಳೆಯಲು ಈ ಎಲ್ಲ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ಸಮಗ್ರ ಚರ್ಚೆ ನಡೆಸಬೇಕಿದೆ. ಅದಕ್ಕಾಗಿ ಸಭಾಧ್ಯಕ್ಷರಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದೇವೆ ಎಂದರು. ದೇಶದಲ್ಲಿ ಇದುವರೆಗೆ ಮಂಡಿಸಿರುವ ಅವಿಶ್ವಾಸ ನಿರ್ಣಯಗಳಿಗೆ ಯಶಸ್ಸು ಸಿಕ್ಕಿರುವುದು ವಿರಳ ಇದು ಗೊತ್ತಿದೆ. ಸರ್ಕಾರದ ಬಗೆಗೆ ಚರ್ಚೆ ಆಗಲೇಬೇಕಿದೆ ಎಂದು ಹೇಳಿದರು. ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಮಾಡಲು ಸಿದ್ದರಾಗಿರುವ ಎಚ್.ಡಿ.ಕುಮಾರಸ್ವಾಮಿ ಎರಡು ದೊಡ್ಡ ಬ್ಯಾಗ್‌ಗಳ ತುಂಬ ಕಡತಗಳನ್ನು ತುಂಬಿಕೊಂಡು ಸದನಕ್ಕೆ ಹಾಜರಾದರು.

Write A Comment