ಕರ್ನಾಟಕ

ಮಂಗಳೂರು ಬಜ್ಜಿ: ಬೇಕಾಗುವ ಪದಾರ್ಥಗಳು

Pinterest LinkedIn Tumblr

mng-bujjiಬೇಕಾಗುವ ಪದಾರ್ಥಗಳು

ಮೈದಾ ಹಿಟ್ಟು 1 ಕಪ್
ಮೊಸರು ಅರ್ಧ ಕಪ್
ಶುಂಠಿ 1 ಇಂಚು
ಹಸಿರು ಮೆಣಸಿನಕಾಯಿ-2
ಕರಿಬೇವು ಸೊಪ್ಪು, ಹೆಚ್ಚಿದ ತೆಂಗಿನಕಾಯಿ
ಉಪ್ಪು, ಅಡುಗೆ ಸೋಡಾ
ಕರಿಯಲು ಅಡುಗೆ ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಮೈದಾ ಹಿಟ್ಟಿಗೆ ಮೊಸರು ಹಾಕಿ ಗಂಡು ಬರದಂತೆ ಚೆನ್ನಾಗಿ ಕಲೆಸಿ 2 ಗಂಟೆ ನೆನೆಯಲು ಬಿಡಿ.
ಕಲೆಸಿದ ಮಿಶ್ರಣ ಇಡ್ಲಿ ಹಿಟ್ಟಿನ ಹದಕ್ಕೆ ಬರಬೇಕು
ನಂತರ ನೆನೆದ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವು ಸೊಪ್ಪು, ತೆಂಗಿನ ಕಾಯಿ ಪೀಸ್,ಹಾಕಿ ಮಿಕ್ಸ್ ಮಾಡಿ.
ಆಮೇಲೆ ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ.
ನಂತರ ಸ್ಟವ್ ಹಚ್ಚಿ, ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ,
ಕಾದ ಎಣ್ಣೆಗೆ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಿ.
ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ
ಬಿಸಿ ಇರುವಾಗಲೇ ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಿರಿ.

Write A Comment