ಅಂತರಾಷ್ಟ್ರೀಯ

ನಾವೇಕೆ ಹಣ್ಣನ್ನು ತಿನ್ನಬೇಕು?

Pinterest LinkedIn Tumblr

frotsಹಣ್ಣುಗಳು ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರೆಯುವ ಉಡುಗೊರೆಗಳು. ವಿಟಮಿನ್, ಮಿನರಲ್, ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುವುದರಿಂದ ಹಣ್ಣುಗಳನ್ನು ಸ್ವಾಭಾವಿಕ ಔಷಧಿಗಳೆಂದೂ ಕರೆಯುವರು. ಇವುಗಳಲ್ಲಿರುವ ಪೋಷಾಕಾಂಶಗಳು ಮಾನವ ದೇಹವನ್ನು ರೋಗಗಳಿಂದ ರಕ್ಷಿಸಿ, ಆರೋಗ್ಯವಂತರನ್ನಾಗಿಸುತ್ತವೆ.

ಹಣ್ಣಗಳನ್ನು ತಂದ ನಂತರ ನೇರವಾಗಿ ಸೇವಿಸದೇ ಮೊದಲಿಗೆ ಉಪ್ಪು ನೀರಿನಲ್ಲಿ ಕೆಲಕಾಲ ನೆನೆಸಿಟ್ಟು ನಂತರ ತಣ್ಣನೆಯ ನೀರಿನಲ್ಲಿ ತೊಳೆದು ಬಳಸಬೇಕು. ಇದರಿಂದ ಹಣ್ಣಿನ ಹೊರಭಾಗದಲ್ಲಿ ಸೇರಿರುವ ಧೂರು ಮತ್ತಿತರೆ ರೋಗಕಾರಗಳು ಸ್ವಚ್ಛವಾಗುತ್ತವೆ.

ಬನ್ನಿ ಕೆಲವು ಹಣ್ಣುಗಳಿಂದ ಏನೇನು ಲಾಭ ನೋಡೋಣ…

ಅನಾನಸ್

ನಾರಿನಂಶವೂ ಹೆಚ್ಚಾಗಿದ್ದು, ವಿಸರ್ಜನೆ ಕ್ರಿಯೆಗೆ ಸಹಾಯಕ.

ಇದರಲ್ಲಿನ ಕ್ಯಾಲ್ಸಿಯಂ ಹಾಗೂ ಮ್ಯಾಂಗನೀಸ್‌ಗಳು ಮೂಳೆ ಹಾಗೂ ಹಲ್ಲುಗಳನ್ನು ಗಟ್ಟಿಗೊಳಿಸುತ್ತವೆ.

ಇದರಲ್ಲಿನ ಎ, ಸಿ, ಜೀವಸತ್ವಗಳು ರೋಗಾಣುಗಳ ವಿರುದ್ಧ ಹೋರಾಡುತ್ತವೆ.

ಆ್ಯಸಿಡಿಟಿ ನಿಯಂತ್ರಿಸುತ್ತದೆ.

ಸ್ನಾಯು ದುರ್ಬಲವಾಗುವಿಕೆಯನ್ನು ತಡೆಗಟ್ಟುತ್ತದೆ.

ಕಿತ್ತಳೆ

ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.

ಕೊಬ್ಬನ್ನು ಕರಗಿಸಿ, ಮೂತ್ರ ಪಿಂಡವನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ರಕ್ತಶುದ್ಧೀಕರಣದಲ್ಲಿ ನೆರವಾಗುತ್ತದೆ.

ಬಾಳೆ

ಸದಾಕಾಲ ಚಟುವಟಿಕೆಯಿಂದಿರುವಂತೆ ಮಾಡುತ್ತದೆ. ರಕ್ತದೊಡ್ಡವನ್ನು ನಿಯಂತ್ರಿಸಿ, ಹೃದಯಾಘಾತವನ್ನು ತಡೆಯುತ್ತದೆ. ಮೆದುಳಿನ ಬೆಳವಣಿಗೆಗೆ ಸಹಕಾರಿ.

ಖನ್ನತೆಯನ್ನು ನಿವಾರಿಸುತ್ತದೆ.

ಸಂಧಿವಾತ ನಿಯಂತ್ರಿಸಲು ಸೂಕ್ತವಾದದ್ದು. ಅಲ್ಲದೆ ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ.

ಕಲ್ಲಂಗಡಿ

ರಕ್ತದೊಡ್ಡವನ್ನು ನಿಯಂತ್ರಿಸಿ, ಹೃದಯಾಘಾತವನ್ನು ತಡೆಯುತ್ತದೆ.

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿ.

ಶೇ.92ರಷ್ಟು ನೀರಿನಂಶ ಹೊಂದಿದ್ದು, ದೇಹವನ್ನು ತಂಪಾಗಿಡುತ್ತದೆ.

ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ.

ಶಕ್ತಿ ಉತ್ಪಾದನೆಗೆ ಸಹಾಯಕ

ಸೇಬು

ಅಸ್ತಮಾ ನಿಯಂತ್ರಿಸಲು ಸಹಾಯಕ

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.

ಶ್ವಾಸಕೋಶ, ಕರುಳು ಸಂಬಂಧಿ ಕ್ಯಾನ್ಸರ್‌ಗಳ ನಿವಾರಣೆಗೆ ಉಪಯುಕ್ತ.

ಕೊಬ್ಬನ್ನು ಕಡಿಮೆಗೊಳಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿ.

ತೂಕ ನಿಯಂತ್ರಣಕ್ಕೆ ಸಹಕಾರಿ

ಅಂಜೂರ

ಕಡಿಮೆ ಕೊಬ್ಬಿನಂಶವನ್ನು, ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ.

ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಒಣ ಅಂಜೂರದಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಮ್ ಹೆಚ್ಚಿದ್ದು, ಹೃದಯ ಬಡಿತ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ದ್ರಾಕ್ಷಿ

ಪಾಲಿಪೇನಾಲಿಕ್ ಆಂಟಿ ಆಕ್ಸಿಡೆಂಟ್ಸ್, ಜೀವಸತ್ವಗಳು ಮತ್ತು ಖನಿಜಾಂಶಗಳ ಆಗರ.

ಕ್ಯಾನ್ಸರ್ ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ.

ಸ್ನಾಯುಸೆಳೆತವನ್ನು ತಡೆಗಟ್ಟುತ್ತದೆ.

ದಾಳಿಂಬೆ

ಹೆಚ್ಚು ಕೊಬ್ಬಿನಂಶವನ್ನು ಹೊಂದಿಲ್ಲದಿದ್ದರೆ ತೂಕ ನಿಯಂತ್ರಣಕ್ಕೆ ಸಹಕಾರಿ.

ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ.

ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.

Write A Comment