ಕರ್ನಾಟಕ

ಶಾರ್ಟ್ ಸರ್ಕ್ಯೂಟ್‌ನಿಂದ 6 ಮನೆಗಳಿಗೆ ಬೆಂಕಿ

Pinterest LinkedIn Tumblr

kkkkಚಿಕ್ಕೋಡಿ: ಬೆಳಗಾವಿಯ ಚಿಕ್ಕೋಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡು 6 ಮನೆಗಳಿಗೆ ಬೆಂಕಿ ತಗುಲಿದೆ. ಬೆಂಕಿಯ ರುದ್ರನರ್ತನಕ್ಕೆ ಮನೆಗಳಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿವೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಚಿಕ್ಕೋಡಿಯ ಹುದ್ದಾರಗಲ್ಲಿಯಲ್ಲಿ ಈ ಘಟನೆ ಸಂಭವಿಸಿದ್ದು, ಮನೆಯಲ್ಲಿರುವ ಅನಿಲ್ ಸಿಲಿಂಡರ್ ಸ್ಫೋಟಿಸಿದರೆ ಭಾರೀ ಅನಾಹುತವಾಗಬಹುದೆಂದು ಹೇಳಲಾಗಿದೆ.

ಒಂದು ಮನೆಯಲ್ಲಿ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ಮನೆಯಲ್ಲಿದ್ದ ವಸ್ತುಗಳಿಗೆ ಬೆಂಕಿ ತಗುಲಿತು . ಆ ಬೆಂಕಿಯ ಜ್ವಾಲೆಗಳು ಇತರ ಮನೆಗಳಿಗೂ ವ್ಯಾಪಿಸಿ ಒಟ್ಟು ಆರು ಮನೆಗಳಿಗೆ ಬೆಂಕಿ ಹತ್ತಿಕೊಂಡು ಉರಿಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಮನೆಯ ಮಾಲೀಕರಿಗೆ ಮುಖದಲ್ಲಿ ಮನೆಗೆ ಬೆಂಕಿಹತ್ತಿಕೊಂಡಿದ್ದರಿಂದ ಆತಂಕದ ಛಾಯೆ ಕವಿದಿದೆ. ತಮ್ಮ ಮನೆಗಳು ಮತ್ತಷ್ಟು ಉರಿದುಹೋಗುವುದಿರಿಂದ ತಪ್ಪಿಸಲು ಇನ್ನಿಲ್ಲದ ಯತ್ನ ನಡೆಸಿದ್ದಾರೆ.

Write A Comment