ರಾಷ್ಟ್ರೀಯ

ಕಡಿಮೆಯಾದ ನುಸುಳುವಿಕೆ: ಕೇಂದ್ರ ಪಡೆ ಸಿಬ್ಬಂದಿ ಕಡಿತಕ್ಕೆ ಚಿಂತನೆ; ರಾಜ್‌ನಾಥ್ ಸಿಂಗ್

Pinterest LinkedIn Tumblr

0402-2-2-RAJANATHಗೌಹಾತಿ: ಈಶಾನ್ಯ ಭಾರತದಲ್ಲಿ ನುಸುಳುವಿಕೆ ಕಡಿಮೆಯಾಗಿದ್ದು, ಬಹುತೇಕ ಶಾಂತಿ ನೆಲೆಸಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಪಡೆ ಸಿಬ್ಬಂದಿ ನಿಯೋಜನೆಯನ್ನು ಕಡಿತಗೊಳಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ‘ನುಸುಳುವಿಕೆ ಕಡಿಮೆಯಾಗಿ, ಪರಿಸ್ಥಿತಿ ಸುಧಾರಿಸಿದರೂ, ಮುಂಚೆಗಿಂತ ಹೆಚ್ಚಿನ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಅಗತ್ಯವಿದ್ದರೆ ಭದ್ರತಾ ಸಿಬ್ಬಂದಿ ನಿಯೋಜಿಸಲು ಕೇಂದ್ರ ಸರಕಾರ ಹಿಂದು ಮುಂದು ನೋಡುವುದಿಲ್ಲ,’ ಎಂದು ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ನೇಮಕದ ವರದಿ ನೀಡಲು ಎಲ್ಲ ರಾಜ್ಯಗಳಿಗೂ ಸಿಂಗ್ ಸೂಚಿಸಿದ್ದಾರೆ.

‘ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿದ್ದು, ಭದ್ರತೆ ವಿಷಯದಲ್ಲಿ ರಾಜಿಯಾಗದೆ, ಕೇಂದ್ರ ಸಿಬ್ಬಂದಿಯನ್ನು ಕಡಿತಗೊಳಿಸಲಾಗುವುದು. ಆಗ ಈ ಭಾಗದ ಸುರಕ್ಷತೆ ಬಗ್ಗೆ ಹೊರಗಿನವರಲ್ಲಿಯೂ ಸದಭಿಪ್ರಾಯ ಮೂಡಲು ನೆರವಾಗುವುದು,’ ಎಂದು ಸಿಂಗ್ ಹೇಳಿದ್ದಾರೆ.

‘ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳನ್ನು ಹೊರತುಪಡಿಸಿ, ಮಿಜೋರಾಂ, ತ್ರಿಪುರಾ, ಅಸ್ಸಾಂನ ಬಹುತೇಕ ಭಾಗ ಮತ್ತು ಮೇಘಾಲಯಗಳಲ್ಲಿ ಒಳನುಸುಳುವಿಕೆ ಕಡಿಮೆಯಾಗಿದೆ. ಅಲ್ಲದೇ ನಾಗಲ್ಯಾಂಡ್ ಹಾಗೂ ಮಣಿಪುರಗಳಲ್ಲಿಯೂ ಬಹುತೇಕ ಶಾಂತಿ ನೆಲೆಸಿದೆ’, ಎಂದ ಸಿಂಗ್ ಇಂಥ ಪರಿಸ್ಥಿತಿಯನ್ನು ತರಲು ಯತ್ನಿಸಿದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.

Write A Comment