ಕರ್ನಾಟಕ

ಸಾಲ ತೀರಿಸಲು ಕಿಡ್ನಿ ಮಾರಾಟ ಮಾಡಿದ್ದ ಮಹಿಳೆಗೆ ಸರ್ಕಾರದಿಂದ ಸಹಾಯಹಸ್ತ

Pinterest LinkedIn Tumblr

kedney-saled-women

ಮಾಗಡಿ, ಜು.11: ಸಾಲ ತೀರಿಸಲು ಕಿಡ್ನಿ ಮಾರಾಟ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ಅವರಿಗೆ ಸರ್ಕಾರದಿಂದ ಸಹಾಯಹಸ್ತ ನೀಡುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ಭರವಸೆ ನೀಡಿದರು.

ಮಾಗಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಶಶಿಕಲಾಳ ಆರೋಗ್ಯ ವಿಚಾರಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಸಾಲ ಮಾಡಿ ವಿನಾಕಾರಣ ತೊಂದರೆ ತಂದುಕೊಳ್ಳುವ ಮುಂಚೆ ಜವಾಬ್ದಾರಿಯಿಂದ ನಡೆದುಕೊಳ್ಳುವ ಅಗತ್ಯವಿದೆ. ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಶಶಿಕಲಾ ಅವರ ಆರೋಗ್ಯದತ್ತ ಹೆಚ್ಚಿನ ನಿಗಾ ವಹಿಸುವಂತೆ ಮಂಜುಳಾ ಮಾನಸ ತಿಳಿಸಿದರು. ಕಾಂಗ್ರೆಸ್ ಮುಖಂಡ ಬಿ.ವಿ.ಜಯರಾಮ್ ಮಾತನಾಡಿ, ಶಶಿಕಲಾ ಅವರಿಗೆ ಆಗಿರುವ ಅನ್ಯಾಯದ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು. ಮೂತ್ರಪಿಂಡ ಮಾರಾಟದ ಬಗ್ಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದರು.

ಪ್ರಗತಿಪರ ಹೋರಾಟಗಾರ ಸಿ.ಜಯರಾಮ್ ಮಾತನಾಡಿ, ಮೀಟರ್ ಬಡ್ಡಿ ನಡೆಸುವವರಿಂದ ಹಲವು ಕುಟುಂಬಗಳು ಇಂದು ಬೀದಿಗೆ ಬೀಳುತ್ತಿವೆ. ಮೀಟರ್ ಬಡ್ಡಿ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಚಿಂತಕ ಕಲ್ಕೆರೆ ಶಿವಣ್ಣ ಮಾತನಾಡಿ, ಬಡತನದಿಂದ ಬಳಲುತ್ತಿರುವ ಮಹಿಳೆಯರು ಸಾಲ ಮಾಡಿ ತೀರಿಸಲಾರದೆ, ಬದುಕಿನ ಅಂತ್ಯ ಕಾಣುವತ್ತ ಸಾಗಿರುವುದನ್ನು ತಡೆಗಟ್ಟಲು ಸರ್ಕಾರ ಬಡ ಮಹಿಳೆಯರ ನೆರವಿಗೆ ಮುಂದಾಗಬೇಕಿದೆ ಎಂದರು. ಡಿ.ಎಚ್.ಒ ಡಾ.ವಿಜಯಾನರಸಿಂಹ, ಮನೋರೋಗ ತe ಡಾ.ರಜನಿ, ಮೂತ್ರಪಿಂಡ ತಜ್ಞ ಡಾ.ಮುನಿರಾಜು, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಕಾಶ್, ಡಾ.ಆಶಾ, ಡಾ.ಜ್ಞಾನಪ್ರಕಾಶ್, ಡಾ.ಸವಿತ ಹಾಗೂ ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಜೀವಿಕಾ ಸಂಚಾಲಕ ಗಂಗಹನುಮಯ್ಯ, ಭೂ ಬ್ಯಾಂಕ್ ಮಾಜಿ ಅಧ್ಯಕ್ಷ ಡಿ.ಸಿ.ಶಿವಣ್ಣ ಇದ್ದರು.

Write A Comment