ಕರ್ನಾಟಕ

ಬಸ್ ನಲ್ಲಿ ಪ್ರಯಾಣಿಸುವ ಯುವತಿಗೆ ಟಿಕೆಟ್‍ನಲ್ಲಿ ಲವ್ ಲೆಟರ್ ಬರೆದ ಕಂಡಕ್ಟರ್ ! ಪೋಷಕರಿಂದ ಹಿಗ್ಗಾಮುಗ್ಗಾ ಥಳಿತ

Pinterest LinkedIn Tumblr

Loveeee

ಬಳ್ಳಾರಿ: ಇಲ್ಲೊಬ್ಬ ಕಂಡಕ್ಟರ್ ಬಸ್‍ನಲ್ಲಿ ಪ್ರಯಾಣ ಬೆಳೆಸುವ ಯುವತಿಗೆ ಟಿಕೆಟ್ ನಲ್ಲಿಯೇ ಲವ್ ಲೆಟರ್ ಬರೆದು ಸಿಕ್ಕಿಬಿದ್ದು, ಪೋಷಕರಿಂದ ಹಿಗ್ಗಾಮುಗ್ಗಾ ಹೊಡೆತ ಕೂಡ ತಿಂದಿದ್ದಾನೆ.

ಈ ಘಟನೆ ಬಳ್ಳಾರಿಯ ಕೌಲ್ ಬಜಾರ್‍ನಲ್ಲಿ ನಡೆದಿದ್ದು, ಗೋಪಾಲ್ ಎಂಬ ಕಂಡಕ್ಟರ್ ಯುವತಿಗೆ ಟಿಕೆಟ್‍ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದು ತನ್ನ ಫೋನ್ ನಂಬರ್‍ನನ್ನು ಬರೆದಿದ್ದಾನೆ. ಈ ಬಗ್ಗೆ ಯುವತಿ ವಿರೋಧ ವ್ಯಕ್ತಪಡಿಸಿದ್ದು ಅಲ್ಲದೇ ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಯುವತಿಯ ಪೋಷಕರು ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸಂಬಂಧ ಕೌಲ್ ಬಜಾರ್ ಪೊಲೀಸರು ಬಸ್ ಕಂಡಕ್ಟರ್‍ನನ್ನು ಬಂಧಿಸಿದ್ದಾರೆ. ಆರೋಪಿ ಗೋಪಾಲ ಬಳ್ಳಾರಿಯ 1ನೇ ಘಟಕದ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದನು.

Write A Comment