ಸ್ಯಾಂಡಲ್‌ವುಡ್‌ನಲ್ಲಿ ಹ್ಯಾಟ್ರಿಕ್ ಸ್ಟಾರ್ ಆಗಿ ಪ್ರೇಕ್ಷಕರ ಮನಗೆದ್ದ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅವರ ನಿವಾಸದಲ್ಲಿ ಜು.12ರಂದು ಅದ್ಧೂರಿಯಾಗಿ ನೆರವೇರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಶಿವಣ್ಣನ ಹುಟ್ಟುಹಬ್ಬ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ.
ಶಿವಣ್ಣ ಅಭಿನಯಿಸುತ್ತಿರುವ ಮೂರು ಚಿತ್ರಗಳ ಟೀಸರ್‌ಗಳನ್ನು ಅಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಜನಪ್ರಿಯತೆಯ ತುತ್ತ ತುದಿಯಲ್ಲಿದ್ದರೂ, ಅವರು ಯಾವುದೇ ಅಮಲನ್ನು ಹತ್ತಿರ ಬಿಟ್ಟುಕೊಂಡವರಲ್ಲ. ವ್ಯಕ್ತಿಯಾಗಿ ಅವರೊಬ್ಬ ಸಂಭಾವಿತ. ಇಂತಹ ಮಹಾನ್ ನಟ 53 ತುಂಬಿ 54ನೆ ವಸಂತಕ್ಕೆ ಕಾಲಿಡುತ್ತಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸೆಂಚುರಿ ಸ್ಟಾರ್ ಆಗಿ ಅಭಿಮಾನಿಗಳ ಆರಾಧ್ಯ ದೈವರಾಗಿದ್ದಾರೆ.
ಯಾವುದೇ ನಾಯಕ ನಟ 50 ತುಂಬಿತು ಎನ್ನುವಾಗ ಇಳಿಮುಖ ಕಾಣುವುದು ಸರ್ವೆ ಸಾಮಾನ್ಯ. ಆದರೆ, ಶಿವರಾಜ್‌ಕುಮಾರ್ ಅವರ ಹಾದಿ ಹಾಗಲ್ಲ. ಅವರ ಮುಂದೆ ಹಲವರು ನಾಯಕ ನಟರು ಮುಂದೆ ಬಂದರೂ ಶಿವರಾಜ್ ಕುಮಾರ್ ತನ್ನದೇ ಶೈಲಿಯಿಂದ ಚಿತ್ರ ರಸಿಕರ ಹೃದಯದಲ್ಲಿ ಸ್ಟಾರ್ ಆಗಿ ಮುಂದುವರೆದಿದ್ದಾರೆ. ಈಗಷ್ಟೇ ಅವರ ಅಭಿನಯದ ವಜ್ರಕಾಯ ಹಿಟ್ ಆಗಿ ಅವರ ಅಭಿಮಾನಿಗಳು ಸಂಭ್ರಮದಲ್ಲಿರುವಾಗಲೇ ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬ ಕೂಡಾ ಬಂದಾಗಿದೆ.
ಅಭಿಮಾನಿಗಳು ಸಂಭ್ರಮ ಪಡಲೆಂದೇ ಶಿವರಾಜ್ ಕುಮಾರ್ ಹುಟ್ಟುಹಬ್ಬವಾದ ಭಾನುವಾರ ಅವರ ಅಭಿನಯದ ಮೂರು ಚಿತ್ರಗಳ ಟೀಸರ್ ಬಿಡುಗಡೆ ಗೊಳ್ಳುತ್ತದೆ. ಶಿವರಾಜ್ ಕುಮಾರ್ ವಿವಿಧ ಪಾತ್ರದಲ್ಲಿ, ವಿವಿಧ ಭಂಗಿಯಲ್ಲಿ ಅಭಿಮಾನಿಗಳಿಗೆ ಸಂತಸ ಕೊಡಲಿದ್ದಾರೆ. ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ವಿವಾದವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ರಾಮ್ ಗೋಪಾಲ್ ವರ್ಮಾ ಕನ್ನಡದಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಅವರು ನಿರ್ಮಿಸಿ-ನಿರ್ದೇಶಿಸುವ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಶಿವರಾಜ್ ಕುಮಾರ್‌ಗೆ ಒಂದು ರಿಯಾಲಿಟಿ ಎನ್ನಬಹುದಾದ ಪಾತ್ರವಿದೆ. ಕೆ. ಎ. ಸುರೇಶ್ ನಿರ್ಮಿಸುವ ಶಿವಲಿಂಗ ತರಣ್ ಶಿವಪ್ಪ ಅವರ ಮಾಸ್ ಲೀಡರ್ ನಲ್ಲೂ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇವೆಲ್ಲಾ ಭಾರೀ ಬಡ್ಜೆಟ್ ಚಿತ್ರಗಳು. ವೃತ್ತಿ ಜೀವನದಲ್ಲಿ ಒಳ್ಳೆ ಬದುಕಿನಲ್ಲಿರುವ ಶಿವರಾಜ್ ಕುಮಾರ್ ಮುಂದಿನ ದಿನಗಳಲ್ಲಿ ಅದನ್ನು ಮತ್ತಷ್ಟು ಸುಭದ್ರಗೊಳಿಸುತ್ತಿದ್ದಾರೆ. ಈ ವರ್ಷದ ಹುಟ್ಟುಹಬ್ಬ ಶಿವಣ್ಣನಿಗೆ ಬಹಳಷ್ಟು ಸಂಭ್ರಮದ ವರ್ಷವಾಗಲಿದೆ. ಏಕೆಂದರೆ, ಇದೇ ವರ್ಷ ಅವರ ಸುಪುತ್ರಿಯ ವಿವಾಹ ಕೂಡ ನೆರವೇರಲಿದೆ. ಹಾಗೆಯೇ ಬಹಳಷ್ಟು ಚಿತ್ರ ನಿರ್ಮಾಪಕರು ಕೂಡ ಶಿವಣ್ಣನ ಸಿನಿಮಾ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ.
