ಕರ್ನಾಟಕ

ಹಾಸಿಗೆ, ದಿಂಬು ಖರೀದಿ ಅವ್ಯವಹಾರ: ಮಣಿಯದ ಸರ್ಕಾರ; ಧರಣಿ ಕೈಬಿಟ್ಟ ಪ್ರತಿಪಕ್ಷಗಳು

Pinterest LinkedIn Tumblr

s

ಬೆಳಗಾವಿ: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಹಾಸಿಗೆ ಮತ್ತು ದಿಂಬು ಖರೀದಿಸುವಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗೆ ಸದನ ಸಮಿತಿ ರಚಿಸುವಂತೆ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷಗಳು ಎಷ್ಟೇ ಪಟ್ಟು ಹಿಡಿದರೂ ಸರ್ಕಾರ ಒಪ್ಪಲಿಲ್ಲ.

ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮಂಗಳವಾರ ಇಡೀ ದಿನ ಧರಣಿ ನಡೆಸಿದ್ದರು. ಬುಧವಾರ ಕೂಡ ಸದನ ಸೇರುತ್ತಿದ್ದಂತೆ ಧರಣಿಯನ್ನು ಮುಂದು ವರಿಸಿದರು. ಆದರೂ ಸದನ ಸಮಿತಿ ರಚಿಸಲು ಸರ್ಕಾರ ಒಪ್ಪಲಿಲ್ಲ. ಸರ್ಕಾರದ ಈ ನಿಲುವನ್ನು ಕಟುವಾಗಿ ಖಂಡಿಸಿದ ವಿರೋಧ ಪಕ್ಷಗಳ ಸದಸ್ಯರು ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಿದರು.

ವಿರೋಧ ಪಕ್ಷದ ಸದಸ್ಯರ ಮನವೊ ಲಿಸಲು ಮುಂದಾದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ‘ಅವ್ಯವಹಾ ರದ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಅಧಿವೇಶನ ಮುಗಿಯು ವುದರೊಳಗೆ ಅವರಿಂದ ವರದಿಯನ್ನು ತರಿಸಲಾ ಗುವುದು’ ಎಂದು ಭರವಸೆ ನೀಡಿದರು. ಇದರಿಂದ ವಿರೋಧ ಪಕ್ಷಗಳಿಗೆ ಸಮಾ ಧಾನ ಆಗಲಿಲ್ಲ.

ಸಾಬೀತಾದರೆ ಕ್ರಮ: ಸಭಾನಾಯಕ ಸಚಿವ ಎಸ್.ಆರ್. ಪಾಟೀಲ ಮಾತ ನಾಡಿ, ‘ಅಧಿಕಾರಿಗಳು ತಪ್ಪೆಸಗಿರುವುದು ಸಾಬೀತಾದರೆ, ವರದಿ ಕೈಸೇರಿದ 30 ದಿನಗಳ ಒಳಗೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಇದನ್ನು ಸ್ವಾಗತಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ‘ರಾಜ್ಯದಲ್ಲಿರುವ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯ ಗಳ ಪರಿಸ್ಥಿತಿ ಹದಗೆಟ್ಟಿದೆ. ಇವುಗಳ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಯಾದರೂ ಸದನ ಸಮಿತಿ ರಚಿಸಬೇಕು’ ಒತ್ತಾಯಿಸಿದರು. ಜೆಡಿಎಸ್ ನ ಬಸವ ರಾಜ ಹೊರಟ್ಟಿ ಅವರೂ ಇದಕ್ಕೆ ದನಿಗೂಡಿಸಿದರು. ಈ ಬೇಡಿಕೆಗೆ ಆಡಳಿತ ಪಕ್ಷ ಒಪ್ಪಲಿಲ್ಲ.

‘ನಮ್ಮ ಪಕ್ಷದ ವತಿಯಿಂದಲೇ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ವರದಿ ನೀಡುತ್ತೇವೆ. ಅದನ್ನಾದರೂ ಪರಿಗಣಿಸಿ’ಎಂದರು. ‘ಅದರ ಅಗತ್ಯ ಇಲ್ಲ’ ಎಂದು ಸಭಾನಾಯಕರು ಸ್ಪಷ್ಟಪಡಿ ಸಿದರು. ಧರಣಿ ಮತ್ತೆ ಮುಂದುವ ರಿದಾಗ, ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ‘ಸದನ ಮುಂದುವರಿಯಬೇ ಕೆಂಬ ಇಚ್ಚೆ ಇದ್ದರೆ ಸದಸ್ಯರು ಆಸೀನರಾ ಗಬೇಕು’ ಎಂದು ಕಟ್ಟುನಿಟ್ಟಾಗಿ ಸೂಚಿ ಸಿದರು. ಬಳಿಕ ವಿರೋಧ ಪಕ್ಷದ ಸದಸ್ಯರು ಆಸನಗಳಿಗೆ ಮರಳಿದರು.

ದಿಂಬು ತಂದ ಶರವಣ
ವಿರೋಧಪಕ್ಷಗಳ ಸದಸ್ಯರು ಬಾವಿಗಳಿದು ಪ್ರತಿಭಟನೆ ನಡೆಸುವಾಗ, ಜೆಡಿಎಸ್‌ನ ಟಿ.ಎ.ಶರವಣ ದಿಂಬನ್ನು ತಲೆಯ ಮೇಲೆ ಇಟ್ಟುಕೊಂಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಸಚೇತಕ ಆರ್.ವಿ. ವೆಂಕಟೇಶ್, ‘ಇವರೇನು ಜೋಕರ್‌ಗಳೇ? ವಿಧಾನ ಪರಿಷತ್ತನ್ನು ವಿಸರ್ಜಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಸದಸ್ಯರ ಇಂತಹ ನಡವಳಿಕೆಯಿಂದ ಸದನದ ಗೌರವಕ್ಕೆ ಮತ್ತಷ್ಟು ಧಕ್ಕೆ ಉಂಟಾಗು ತ್ತದೆ’ ಎಂದು ಆರೋಪಿಸಿದರು.

‘ದುವರ್ತನೆ ತೋರಿದ ಸದಸ್ಯರನ್ನು ಅಮಾನತು ಮಾಡ ಬೇಕು’ ಎಂದು ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ಗದ್ದಲ ನಡೆಯುತ್ತಿರುವಾಗ ಶರವಣ ಅವರು ತಲೆಯಲ್ಲಿ ದಿಂಬು ಹೊತ್ತುಕೊಂಡೇ ಟಿ.ವಿ. ಕ್ಯಾಮೆರಾಗಳ ಮುಂದೆ ಹೋದರು.
ಅವರ ಈ ವರ್ತನೆಯಿಂದ ಸಿಟ್ಟಾದ ಸಭಾಪತಿ, ‘ಪ್ರತಿಭಟನೆ ನಡೆಸುವುದಕ್ಕೆ ಹಲವು ಮಾರ್ಗಗಳಿವೆ. ಒಳಗೆ ಈ ರೀತಿ ವಸ್ತುಗಳನ್ನು ತಂದು ಪ್ರದರ್ಶಿಸುವುದು ಸದನದ ಗಾಂಭೀರ್ಯಕ್ಕೆ ಧಕ್ಕೆ ತರುತ್ತದೆ. ಇಂತಹ ವರ್ತನೆ ಇದೇ ಮೊದಲ, ಇದೇ ಕೊನೆ ಆಗಬೇಕು’ ಎಂದು ತಾಕೀತು ಮಾಡಿದರು.

‘ಪರಿಷತ್ತಿನ ಬಗ್ಗೆ ಜನರು ಹಾಗೂ ಮಾಧ್ಯಮಗಳಲ್ಲಿ ಚರ್ಚೆ ನಡೆಯು ತ್ತಿದೆ. ಇದು ಒಂದು ರೀತಿ ನಮ್ಮನ್ನು ನಾವೇ ಪ್ರಪಾತಕ್ಕೆ ತಳ್ಳಿಕೊಳ್ಳುವಂತಹ ಸಂಗತಿ. ಇಂತಹ ವಿಚಿತ್ರ ಸನ್ನಿವೇಶ ಸೃಷ್ಟಿಸಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಇಂತಹ ಘಟನೆ ಮರುಕಳಿಸಿದರೆ ಗಂಭೀರ ಕ್ರಮ ಎದುರಿಸಬೇ ಕಾಗುತ್ತದೆ’ ಎಂದು ಎಚ್ಚರಿಸಿದರು.

Write A Comment