ಕರ್ನಾಟಕ

ಮಂಡ್ಯ: ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ 4 ರೈತ ಮಹಿಳೆಯರ ಆತ್ಮಹತ್ಯೆ ಯತ್ನ; 6 ಎಕರೆ ಕಬ್ಬು ಭಸ್ಮ

Pinterest LinkedIn Tumblr

pvec09Julyhbh2

ಮಂಡ್ಯ, ಜು.9: ತಾನು ಬೆಳೆದ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ ಅದರಲ್ಲಿ ತಾನೂ ಜಿಗಿದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಮಾಸುವ ಮುನ್ನವೇ ನಾಲ್ಕು ಮಂದಿ ರೈತ ಮಹಿಳೆಯರು ಅದೇ ಹಾದಿ ತುಳಿಯುವ ಯತ್ನ ನಡೆಸಿದ್ದು, ಗ್ರಾಮಸ್ಥರು ಅವರನ್ನು ಪಾರು ಮಾಡಿದ್ದಾರೆ.

ಬೆಳೆದ ಕಬ್ಬು ಕಟಾವು ಆಗದೆ ಸಾಲದಿಂದ ಬೇಸತ್ತ ನಾಲ್ವರು ಮಹಿಳೆಯರು ತಮ್ಮ ಕಬ್ಬಿನ ಗದ್ದೆಗೆ ಬೆಂಕಿಹಚ್ಚಿ ಅದರಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿರುವ ಘಟನೆ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

pvec09jul15mnd2

ಗ್ರಾಮದ ಪಾರ್ವತಮ್ಮ, ಜಯಂತಿ, ಸುನಂದಾ ಹಾಗೂ ಕಣ್ಣಮ್ಮ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ಈ ಘಟನೆಯಿಂದ ಸುಮಾರು 7 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಕಬ್ಬು ಸಂಪೂರ್ಣವಾಗಿ ಭಸ್ಮವಾಗಿದೆ. ಗ್ರಾಮಸ್ಥರು ಬೆಂಕಿ ನಂದಿಸಿ ಇತರ ಜಮೀನಿನ ಕಬ್ಬಿಗೂ ಬೆಂಕಿವ್ಯಾಪಿಸುವುದನ್ನು ತಡೆದಿದ್ದಾರೆ.

ಕಬ್ಬು ಮತ್ತೆ ಇತರ ಬೆಳೆ ಬೆಳೆಯಲು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯರು ಕುಟುಂಬದವರು ಬ್ಯಾಂಕು, ವ್ಯವಸಾಯ ಸೇವಾ ಸಹಕಾರ ಸಂಘ ಸೇರಿದಂತೆ ಲೇವಾದೇವಿದಾರರಿಂದ ಲಕ್ಷಾಂತರ ರೂ. ಸಾಲ ಪಡೆದಿದ್ದು, ಸಾಲವನ್ನು ತೀರಿಸಲು ದಾರಿ ಕಾಣದೆ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅದರಂತೆ, ಮಧ್ಯಾಹ್ನ ಜಮೀನಿನ ಬಳಿ ತೆರಳಿದ ಈ ಮಹಿಳೆಯರು, ಸುಮಾರು 10 ತಿಂಗಳ ಅವಧಿಯ ಬೆಳೆದು ನಿಂತ ಕಬ್ಬಿಗೆ ಬೆಂಕಿಹಾಕಿ ತಾವೂ ಗದ್ದೆಯೊಳಗೆ ಸೇರಿದ್ದಾರೆ. ಕಬ್ಬಿನಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಮಹಿಳೆಯರನ್ನು ಅಪಾಯದಿಂದ ಪಾರು ಮಾಡಿದ್ದಾರೆ.

ಆದರೆ, ಮಹಿಳೆಯರನ್ನು ರಕ್ಷಿಸಿದ ಗ್ರಾಮಸ್ಥರು ಕಬ್ಬನ್ನು ರಕ್ಷಿಸಲು ವಿಫಲರಾದರು. ಸುನಂದಾ ಅವರಿಗೆ ಸೇರಿದ 1.6 ಎಕರೆ, ಜಯಂತಿ ಅವರ 1.5 ಎಕರೆ, ಪಾರ್ವತಮ್ಮ ಅವರ 2.5ಎಕರೆ ಹಾಗೂ ಕಣ್ಣಮ್ಮರ 1 ಎಕರೆ ಜಮೀನಿನಲ್ಲಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ.

ಪಾರ್ವತಮ್ಮ 5 ಲಕ್ಷ ರೂ., ಕಣ್ಣಮ್ಮ 2.5 ಲಕ್ಷ ರೂ., ಸುನಂದ 3 ಲಕ್ಷ ರೂ. ಹಾಗೂ ಜಯಂತಿ 4 ಲಕ್ಷ ರೂ. ಸಾಲ ಪಡೆದು ಬೇಸಾಯ ಮಾಡಿದ್ದರು. ಇದಕ್ಕಾಗಿಯೇ ತಾವು ಆತ್ಮಹತ್ಯೆಗೆ ಯತ್ನಿಸಿದೆವೆಂದು ಸ್ವತಃ ಈ ಮಹಿಳೆಯರು ಈ ಸಂದರ್ಭದಲ್ಲಿ ಹೇಳಿಕೊಂಡರು. ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ಡಿವೈಎಸ್ಪಿ ಉದೇಶ್ ಭೇಟಿ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Write A Comment