ಕರ್ನಾಟಕ

ತಾತ್ಕಾಲಿಕವಾಗಿ ತನ್ನ ಕಾರ್ಯ ಚಟುವಟಿಕೆ ನಿಲ್ಲಿಸಿದ ಲೋಕಾಯುಕ್ತ

Pinterest LinkedIn Tumblr

lokayukta-1ಬೆಂಗಳೂರು, ಜು.3- ಹೊಸ ದೂರು ಸ್ವೀಕರಿಸಬಾರದು… ಯಾವುದೇ ತನಿಖೆ ನಡೆಸಬಾರದು… ಇದು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‌ರಾವ್ ಅವರು ತಮ್ಮ ಅಧೀನ ಅಧಿಕಾರಿಗಳಿಗೆ ಹೊರಡಿಸಿರುವ ಕಟ್ಟಪ್ಪಣೆ. ಲೋಕಾಯುಕ್ತ ಸಂಸ್ಥೆಗೆ ಯಾರೇ ಸಾರ್ವಜನಿಕರು ಬಂದು ದೂರು ನೀಡಿದರೂ ಸ್ವೀಕರಿಸಬಾರದು

ಹಾಗೂ ತನಿಖೆ ನಡೆಸಬಾರದು ಎಂದು ಎಡಿಜಿಪಿ ಪ್ರೇಮ್‌ಶಂಕರ್ ಮೀನ  ಅವರಿಗೆ ಭಾಸ್ಕರ್‌ರಾವ್ ಆದೇಶಿಸಿದ್ದಾರೆ. ಸ್ವತಃ ಲೋಕಾಯುಕ್ತ ಸಂಸ್ಥೆ ವಿರುದ್ಧವೇ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಾಗೂ ಲೋಕಾಯುಕ್ತರ ರಾಜೀನಾಮೆಗೆ ಒತ್ತಾಯಿಸಿ ವಕೀಲರು, ವಿವಿಧ ಕನ್ನಡಪರ ಸಂಘಟನೆಗಳು ಲೋಕಾಯುಕ್ತ ಸಂಸ್ಥೆ ಎದುರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾಸ್ಕರ್‌ರಾವ್ ಅವರು ನಿನ್ನೆ ಸಂಜೆಯೇ ಆಂತರಿಕ ಟಿಪ್ಪಣಿ ಹೊರಡಿಸಿದ್ದಾರೆ. ಲೋಕಾಯುಕ್ತರ ಆದೇಶದ ಮೇರೆಗೆ ರಿಜಿಸ್ಟ್ರಾರ್ ಅವರು ಆದೇಶದ ಪ್ರತಿಯನ್ನು ಲೋಕಾಯುಕ್ತ ಕಚೇರಿಯಲ್ಲಿ ಪ್ರಕಟಿಸಿದ್ದಾರೆ. ಹಾಗಾಗಿ ಇಂದಿನಿಂದಲೇ ಯಾವುದೇ ದೂರು ದಾಖಲಿಸುತ್ತಿಲ್ಲ. ದೂರು ದಾಖಲಿಸಲು ಬರುವ ಸಾರ್ವಜನಿಕರು, ಆರ್‌ಟಿಐ ಕಾರ್ಯಕರ್ತರನ್ನು ಲೋಕಾಯುಕ್ತ ಕಚೇರಿಯ ಬಾಗಿಲಿನಿಂದಲೇ ಪೊಲೀಸರು ವಾಪಸು ಕಳುಹಿಸುತ್ತಿದ್ದಾರೆ. ಈ ಆದೇಶದ ಬಗ್ಗೆ ತಿಳಿಯದ ನೂರಾರು ಸಾರ್ವಜನಿಕರು ದೂರು ನೀಡಲು ಬಂದು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸು ಹೋಗುತ್ತಿರುವುದು ಕಂಡುಬಂದಿತು.

Write A Comment