ಅಂತರಾಷ್ಟ್ರೀಯ

ನೈಜೀರಿಯದಲ್ಲಿ ಉಗ್ರ ನರ್ತನ : 150 ಮಂದಿ ಮಾರಣ ಹೋಮ

Pinterest LinkedIn Tumblr

150-killed-in-Nigeria-1ಬೋರ್ನೊ, ಜು.3- ಈಶಾನ್ಯ ನೈಜೀರಿಯಾದ ಬೋರ್ನೊ ಪ್ರಾಂತ್ಯದ ಮೂರು ಹಳ್ಳಿಗಳಿಗೆ ನುಗ್ಗಿದ ಶಂಕಿತ ಬೊಕೊ ಹರಾಂ ಜನಾಂಗೀಯ ಬಂಡುಕೋರರು ಮಕ್ಕಳು-ಮಹಿಳೆಯರು ಸೇರಿದಂತೆ ಮಸೀದಿಗಳಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದ 150 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬೋರ್ನೊ ಪ್ರಂತ್ಯದ ನೈಜೀರಿಯಾ ಹಳ್ಳಿಗಳಿಗೆ ಶಸ್ತ್ರಧಾರಿಗಳಾಗಿ ನುಗ್ಗಿದ ಹಂತಕರು ಅಷ್ಟೂ ಜನರನ್ನು ನಿರ್ದಯವಾಗಿ ಕಗ್ಗೊಲೆ ಮಾಡಿ, ನೂರಾರು ಮನೆಗಳನ್ನು ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ.

ಇದರೊಂದಿಗೆ ನೂರಾರು ಸಾಕು ಪ್ರಾಣಿಗಳೂ ಬೆಂದು ಹೋಗಿವೆ. ನೈಜೀರಿಯದಲ್ಲಿ ಅಧ್ಯಕ್ಷ ಮಹಮ್ಮದ್ ಬುಹಾದಿ ಅಧಿಕಾರಕ್ಕೆ ಬಂದ ನಂತರ ನಿನ್ನೆ ನಡೆದಿರುವ ಈ ಘಟನೆ ಅತ್ಯಂತ ಬರ್ಬರ ಹತ್ಯಾಕಾಂಡವಾಗಿದೆ ಎಂದು ಮೂಲಗಳು ತಿಳಿಸಿವೆ. ಒಂದೇ ಹಳ್ಳಿಯಲ್ಲಿ ಬಂದೂಕು ಧಾರಿಗಳು 97 ಮಂದಿಯನ್ನು ಕೊಂದು ಹಾಕಿದ್ದಾರೆ. ಇನ್ನೆರಡು ಹಳ್ಳಿಗಳಲ್ಲಿ 53 ಜನ ಅಮಾಯಕರನ್ನು ಹತ್ಯೆ ಮಾಡಲಾಗಿದೆ.

Write A Comment