ಅಂತರಾಷ್ಟ್ರೀಯ

ಚೀನಾದಲ್ಲಿ ಪ್ರಭಲ ಭೂಕಂಪ : ನಾಲ್ವರ ಸಾವು, ಹಲವರಿಗೆ ಗಾಯ

Pinterest LinkedIn Tumblr

bhookampa-nepal

ಬೀಜಿಂಗ್, ಜು.3-ಚೀನಾದ ಪಶ್ಚಿಮ ಪ್ರಾಂತ್ಯದ ಜಿಂಜಿಯಾಂಗ್‌ನಲ್ಲಿ ಇಂದು ಸಂಭವಿಸಿದ ಪ್ರಬಲ ಭೂಕಂಪದಲ್ಲಿ 4 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅನೇಕ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ 6.5ರ ತೀವ್ರತೆಯ ಭೂಕಂಪ ಉಂಟಾಗಿದೆ.

ಮನೆಗಳು ನಡುಗಿದ ಅನುಭವವಾಗುತ್ತಿದ್ದಂತೆಯೇ ಜನ ಭೀತಿಗೊಂಡು ಮನೆಗಳನ್ನು ಬಿಟ್ಟು ಹೊರಗೋಡಿ ಬಂದಿದ್ದಾರೆ.  ಹೂಟನ್ ನಗರದಿಂದ 15 ಕಿ.ಮೀ.ದೂರದಲ್ಲಿರುವ ಪಿಶಾನ್ ಕೌಂಟಿಯಲ್ಲಿ ಭೂಮಿ ಹೆಚ್ಚಿನ ಪ್ರಮಾಣದಲ್ಲಿ ನಡುಗಿದೆ ಎಂದು ಭೂಕಂಪನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Write A Comment