ಕರ್ನಾಟಕ

ಮಂಡ್ಯದಲ್ಲಿ ಬರ್ಬರ ಮರ್ಡರ್

Pinterest LinkedIn Tumblr

9733murder_scene_by_monkeyxtartರಾಜಕೀಯ ದ್ವೇಷದಿಂದ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಸ್ನೇಹಿತರ ಜತೆ ಸೇರಿ  ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಭಯಾನಕ ಘಟನೆ ಮಂಡ್ಯದಲ್ಲಿ ನಡೆದಿದೆ.

ಇಲ್ಲಿನ ಬೂದನೂರು ಬಳಿಯ ಮಲ್ಲಯ್ಯನದೊಡ್ಡಿ ನಿವಾಸಿಯಾಗಿರುವ  ಮಾದಪ್ಪ ಎಂಬಾತನನ್ನು ಶನಿವಾರ ಸಂಜೆ  ತನ್ನ ಸಹೋದರ ನಾಗರಾಜು ಜೊತೆ ಬೈಕ್‍ನಲ್ಲಿ ಬರುವಾಗ, ಗ್ರಾಮ ಪಂಚಾಯಿತಿ ಸದಸ್ಯ ಮಂಜೇಶ್ ಸಂಗಡಿಗರೊಂದಿಗೆ ಕಾರಿನಲ್ಲಿ ಬಂದು, ನಾಗರಾಜುಗೆ ಥಳಿಸಿ ಅಪಹರಿಸಿದ್ದರು. ಈ ಕುರಿತು ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಅಲ್ಲದೇ ಅಪಹರಣ ಮಾಡಿದ ದುಷ್ಕರ್ಮಿಗಳು ಮಾದಪ್ಪನನ್ನು ಹತ್ಯೆ ಮಾಡಿ, ಮಂಡ್ಯದ ಬೂದನೂರು ಬಳಿ ಎಸೆದು ಹೋಗಿದ್ದು ಚುನಾವಣೆಯಲ್ಲಿ ಮಾದಪ್ಪ, ಮಂಜೇಶ್ ವಿರುದ್ಧವಾಗಿ ಪ್ರಚಾರ ಮಾಡಿದ್ದೇ ಕೊಲೆಗೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment