ರಾಷ್ಟ್ರೀಯ

ಆಸ್ಸಾಂ ನಲ್ಲಿಯೂ ಭೂ ಕಂಪನ

Pinterest LinkedIn Tumblr

1603earthquake-(1)ಅಸ್ಸಾಂನಲ್ಲಿ ಭಾನುವಾರ ಬೆಳಗ್ಗೆ 6.40ಕ್ಕೆ ಲಘು ಭೂಕಂಪ ಸಂಭವಿಸಿದ್ದು  5.6ರಷ್ಟು ತೀವ್ರತೆಯ ಈ ಕಂಪನಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.

ಅಸ್ಸಾಂನ ವಿವಿದೆಡೆ ಈ ಕಂಪನ ಸಂಭವಿಸಿದ್ದು  ಖೋಬ್ರಝಾರ್ ಜಿಲ್ಲೆಯಲ್ಲಿ 10ಕಿಮೀ ಆಳದಲ್ಲಿ, ಉತ್ತರಕ್ಕೆ 26.5 ಡಿಗ್ರಿಆಕ್ಷಾಂಶ ಹಾಗೂ ಪೂರ್ವಕ್ಕೆ 90.1 ಡಿಗ್ರಿ ರೇಖಾಂಶದಲ್ಲಿ ಭೂಕಂಪನದ ಅಧಿಕೇಂದ್ರವು ನೆಲೆಯಾಗಿತ್ತು ಎಂಬ ಮಾಹಿತಿ ದೊರೆತಿದೆ.

ಭೂಕಂಪನದಿಂದ ಮನೆಗಳ ಕಿಟಕಿ, ಬಾಗಿಲುಗಳು ದಡದಡನೆ ಸದ್ದು ಮಾಡುತ್ತ ಅಲುಗಾಡಿದ್ದರಿಂದ ಜನ ಭಯಭೀತರಾಗಿ ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದು  ಬೆಳಗಿನ ನಿದ್ದೆ ಮಂಪರಿನಲ್ಲಿದ್ದ ಜನ ಮಕ್ಕಳು-ಮರಿಗಳನ್ನು ಎತ್ತಿಕೊಂಡು ಬೀದಿಗೆ ಬಂದು ರಕ್ಷಣೆಗೆ ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಆದರೆ ಇಲ್ಲಿಯವರೆಗೂ ಯಾವುದೇ ಅನಾಹುತವಾಗಿರುವ ಮಾಹಿತಿ ಲಭ್ಯವಾಗಿಲ್ಲ.

Write A Comment