ಕರ್ನಾಟಕ

ಆನ್ ಲೈನ್ ನಲ್ಲಿ ವಂಚನೆ ಜಾಲ: ನೈಜೀರಿಯಾದ ಆರು ಜನರ ಬಂಧನ

Pinterest LinkedIn Tumblr

naijeeriya

ಬೆಂಗಳೂರು, ಜೂ.28: ಕ್ವಿಕರ್ ಡಾಟ್‍ಕಾಮ್ ಕಡಿಮೆ ಬೆಲೆಗೆ ಕಾರು ಇನ್ನಿತರ ದುಬಾರಿ ವಸ್ತಗಳನ್ನು ಮಾರಾಟಮಾಡುವುದಾಗಿ ಹೇಳಿ ವಂಚನೆ ನಡೆಸುತ್ತಿದ್ದ ಭಾರೀ ಜಾಲವನ್ನು ಬೇಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು ವ್ಯವಸ್ಥಿತವಾಗಿ ಜಾಲ ನಡೆಸುತ್ತಿದ್ದ ನೈಜೀರಿಯಾ ಗ್ಯಾಂಗ್‌ನ 6 ಮಂದಿಯನ್ನು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಬೊಲಾಜಿ(36) ಆತನ ಪತ್ನಿ ಚುಕು ಒಕಪಾಲ(30) ಆವೇರಿಯಲ್ ಲಾವಲ್(24) ಓಕಾಜಿಕಾಲಿಂಗ್(28) ಓಜಾಲಾವಲ್(30) ಹಾಗೂ ಕ್ರಸ್ಟಿನಾ ಒಬಿನಾ(31) ಬಂಧಿತ ಆರೋಪಿಗಳಾಗಿದ್ದು ಇನ್ನೂ ಈ ಗ್ಯಾಂಗ್‌‌ನಲ್ಲಿದ್ದು ತಲೆ ಮರೆಸಿಕೊಂಡಿರುವ ಮೂವರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದರು.

ಆರೋಪಿಗಳು ಆನ್‌ಲೈನ್‌ನಲ್ಲಿ ವಿವಿಧ ಬಗೆಯ ಕಾರುಗಳು ದುಬಾರಿ ವಸ್ತುಗಳು ಹಾಗೂ ಸಾಕುನಾಯಿಗಳ ಪೋಟೋಗಳನ್ನು ಹಾಕಿ ಕಡಿಮೆ ಬೆಲೆಗೆ ನೀಡುವುದಾಗಿ ಜಾಹೀರಾತು ನೀಡಿ ವಂಚನೆ ನಡೆಸುತ್ತಿದ್ದರು.

ಕಳೆದ ಜೂ.20 ರಂದು ಶೇಖರ್ ಅವರಿಗೆ ಕಡಿಮೆ ಬೆಲೆಯಲ್ಲಿ ಕಾರು ನೀಡುವುದಾಗಿ ಆ ಕಾರನ್ನು ಏರ್‌ಪೋರ್ಟ್‌ನಲ್ಲಿ ನಿಲ್ಲಿಸಿದ್ದು ತುರ್ತು ಕೆಲಸದ ಮೇಲೆ ವಿದೇಶಕ್ಕೆ ಹೋಗುತ್ತಿರುವುದಾಗಿ ಅವರದೇ ಗುಂಪಿನ ಮಹಿಳೆಯೊಬ್ಬರ ಮೊಬೈಲ್ ನಂಬರ್ ನೀಡಿ ಆಕೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿತ್ತು.

ಮೊಬೈಲ್ ಕರೆ ಮಾಡಿದ ಕೊಡಲೇ ಮಹಿಳೆಯು ತಾನು ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡು ಕಾರು ಖರೀದಿಯ ಹಣವನ್ನು ಬ್ಯಾಂಕ್ ಅಕೌಂಟ್‍ಗಳಿಗೆ ಹಾಕಿಸಿಕೊಂಡು ತಕ್ಷಣವೇ ಎಟಿಎಂಗಳಿಂದ ಡ್ರಾ ಮಾಡಿಕೊಂಡು ಕಾರು ಕೊಡದೇ ವಂಚನೆ ನಡೆಸಲಾಗಿತ್ತು.

ಈ ಸಂಬಂಧ ಚಿಕ್ಕಪೇಟೆ ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಿದ್ದ ವಿಶೇಷ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಗ್ಯಾಂಗ್‌ನನ್ನು ಪತ್ತೆಹಚ್ಚಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ವಂಚನೆ ನಡೆಸುವ ವೇಳೆ ನೂರಾರು ಸಿಮ್‌ಕಾರ್ಡ್‌ಗಳು ಹಲವು ಬ್ಯಾಂಕ್ ಖಾತೆಗಳನ್ನು ತೆರೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಅಲ್ಲದೇ ಬರಾಕ್ ಒಬಾಮ, ಮಿಷೆಲ್ ಒಬಾಮ ಇನ್ನಿತರ ಹೆಸಿನಲ್ಲಿ ನಕಲಿ ಪೌಂಡೇಷನ್‌ಗಳನ್ನು ಸ್ಥಾಪಿಸಿರುವುದು ಕೂಡ ಕಂಡುಬಂದಿದೆ ಎಂದು ಹೇಳಿದರು.

ಆರೋಪಿಗಳು ನಕಲಿ ಪಾಸ್‌ಪೋರ್ಟ್, ವೀಸಾ, ಪಾನ್ ಕಾರ್ಡ್‌ಗಳನ್ನು ತಯಾರಿಸುವುದು ಅಲ್ಲದೇ ಉದ್ಯೋಗಿ ಕೊಡಿಸುವುದಾಗಿ ವಂಚನೆ ನಡೆಸಿರುವುದು ತನಿಖೆಯಲ್ಲಿ ಕಂಡುಬಂದಿದ್ದು ಇವರ ಬಂಧನದಿಂದ 12ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದರು.

ಗ್ಯಾಂಗ್‌ನಿಂದ ಹಲವರು ವಂಚನೆಗೊಳಗಾರುವ ಮಾಹಿತಿ ಲಭ್ಯವಾಗತೊಡಗಿವೆ ವೀಸಾ ಅವಧಿ ಮುಗಿದಿದ್ದರೂ ಆರೋಪಿಗಳು ತಮ್ಮ ದೇಶಕ್ಕೆ ತೆರಳದೇ ವಂಚನೆ ಜಾಲವನ್ನು ಕಳೆದ ಹಲವು ದಿನಗಳಿಂದ ನಡೆಸುತ್ತಿದ್ದರು ಎಂದು ಹೇಳಿದರು.

ಆರೋಪಿಗಳಿಂದ ವಂಚವನೆಗೊಳಗಾಗಿರುವ ಸಾರ್ವಜನಿಕರು ಹತ್ತಿರದ ಪೊಲೀಸ ಠಾಣೆಗಳಿಗೆ ಮಾಹಿತಿ ನೀಡಿದರೆ ತನಿಖೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಬಂಧಿತ ನಾಗಿರುವ ಗ್ಯಾಂಗ್ ಪ್ರಮುಖ ಆರೋಪಿ ಬೊಲಾಜಿ ಹೆಣ್ಣೂರಿನಲ್ಲಿ ಒಂದು ವರ್ಷದ ಹಿಂದೆ ತನ್ನದೇ ದೇಶದ ಯುವಕನೊಬ್ಬನ ಕೊಲೆಯಲ್ಲಿ ಭಾಗಯಾಗಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ ಎಂದರು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್‌ರೆಡ್ಡಿ, ಡಿಸಿಪಿಗಳಾದ ಲಾಬೂರಾಮ್ ವಿಕಾಸ್ ಕುಮಾರ್ ಅವರಿದ್ದರು.

Write A Comment