ಕರ್ನಾಟಕ

ರೈತಾಹುತಿ; ಮೃತ ನಿಂಗೇಗೌಡರ ಮನೆಗೆ ಅಂಬಿ, ದೇವೇಗೌಡ, ಬಿಎಸ್ ವೈ ದೌಡು

Pinterest LinkedIn Tumblr

Yeddyurappa_ಮಂಡ್ಯ: ಸಾಲಬಾಧೆ ತಾಳಲಾರದೆ ತನ್ನ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ, ಜ್ವಾಲೆಗೆ ಧುಮುಕಿ ರೈತ ನಂಜೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದ ಮಂಡ್ಯ ಜಿಲ್ಲೆಯ (ಕಬ್ಬು ಸಾಲಕ್ಕೆ ರೈತಾಹುತಿ) ಪಾಂಡವಪುರ ತಾಲೂಕಿಗೆ ರಾಜಕಾರಣಿಗಳ ದಂಡಯಾತ್ರೆ ನಡೆಯುತ್ತಿದ್ದು, ಶುಕ್ರವಾರ ಮೃತ ನಂಜೇಗೌಡರ ಮನೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಉಸ್ತುವಾರಿ ಸಚಿವ ಅಂಬರೀಶ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದಾರೆ.

ಹೆಣವಿಟ್ಟು ರಾಜಕೀಯ ಮಾಡಲ್ಲ; ಅಂಬರೀಶ್
ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಅಂಬರೀಶ್ ಮೃತ ನಿಂಗೇಗೌಡರ ಮನೆಗೆ ಭೇಟಿ ನೀಡಿ ನಿಂಗೇಗೌಡರ ಪತ್ನಿ, ಮಗನಿಗೆ ಸಾಂತ್ವಾನ ಹೇಳಿದರು. ಅಲ್ಲದೇ ನಿಂಗೇಗೌಡ ಕುಟುಂಬಕ್ಕೆ 1ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅಂಬರೀಶ್, ನಿಂಗೇಗೌಡರ ಸಾವು ಕೇವಲ ಒಬ್ಬ ರೈತನ ಸಾವಲ್ಲ, ಇದು ದೇಶದಲ್ಲಿನ ರೈತರ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಹೆಣವಿಟ್ಟು ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ, ಕುಟುಂಬಕ್ಕೆ ಧೈರ್ಯ ತುಂಬಲು ಬಂದಿದ್ದೇನೆ ಎಂದರು.

ಮೃತ ನಿಂಗೇಗೌಡರ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ನೀಡುವಂತೆ ಪತ್ರ ಬರೆದಿದ್ದೇನೆ. ವಸತಿ ಇಲಾಖೆಯಿಂದ ವಸತಿ ನಿರ್ಮಿಸಿಕೊಡುವ ಭರವಸೆ, ಕಬ್ಬಿಗೆ ಬೆಂಬಲ ಬೆಲ ನಿಗದಿಪಡಿಸುವ ಬಗ್ಗೆ ಸರ್ಕಾರದ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

ನಿಂಗೇಗೌಡ ಕುಟುಂಬಕ್ಕೆ 1ಲಕ್ಷ ರೂ. ಪರಿಹಾರ ಕೊಟ್ಟ ದೇವೇಗೌಡ:
ನಿಂಗೇಗೌಡರ ಮನೆಗೆ ಭೇಟಿ ನೀಡಿದ ಜೆಡಿಎಸ್ ವರಿಷ್ಠ ದೇವೇಗೌಡರು, ಒಂದು ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ನೀಡಿದರು. ನಂತರ ಪತ್ರಕರ್ತರ ಜೊತೆ ಮಾತನಾಡಿ, ಸರ್ಕಾರ ಕಬ್ಬು ಬೆಳೆಗಾರರಿಗೆ ನಿಗದುಪಡಿಸಿದ ಹಣ ಬಿಡುಗಡೆ ಮಾಡಲಿ.  ರೈತರು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ವಿನಂತಿಸಿಕೊಂಡ ಅವರು, ರೈತರ ಪರ ಜೆಡಿಎಸ್ ಹೋರಾಟ ಮುಂದುವರಿಯುತ್ತದೆ ಎಂದರು. ರೈತರ ಸಮಸ್ಯೆಗೆ ಪರಿಹಾರ ದೊರೆಯದಿದ್ದಲ್ಲಿ ಈ ಬಾರಿಯ ಅಧಿವೇಶನ ನಡೆಯುವುದು ಕಷ್ಟ ಎಂದು ದೇವೇಗೌಡರು ಎಚ್ಚರಿಕೆ ನೀಡಿದರು.

ಬಿಎಸ್ ಯಡಿಯೂರಪ್ಪ ಭೇಟಿ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೃತ ನಿಂಗೇಗೌಡರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಇಂತಹ ಘಟನೆ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಂಡಿದ್ದೇನೆ. ಈಗಾಗಲೇ ಹಲವು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ರಾಜ್ಯ ಸರ್ಕಾರ ರೈತರ ಭರವಸೆ ಈಡೇರಿಸಲು ವಿಫಲವಾಗಿದೆ, ರೈತರ ಬಾಕಿ ಪಾವತಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
-ಉದಯವಾಣಿ

Write A Comment