ರಾಷ್ಟ್ರೀಯ

ಹೊಸ ಅವತಾರದಲ್ಲಿ ಮ್ಯಾಗಿ ?

Pinterest LinkedIn Tumblr

nestleಹೊಸದಿಲ್ಲಿ: ನಿಗದಿತ ಮಿತಿಗಿಂತ ಹೆಚ್ಚು ಪ್ರಮಾಣದ ಸೀಸ ಹಾಗೂ ಮೋನೊಸೋಡಿಯಂ ಗ್ಲುಟಮೇಟ್‌ನ ಅಂಶ ಪತ್ತೆಯಾದ ನಂತರ ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಮ್ಯಾಗಿ ನೂಡಲ್ಸ್‌ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲು ಸಿದ್ಧತೆ ನಡೆಸಿದೆ. ಹೌದು, ನೆಸ್ಟ್ಲೆ ವಿಜ್ಞಾನಿಗಳು ‘ಪ್ಲಾನ್‌ ಬಿ’ಗಾಗಿ ಶ್ರಮಿಸುತ್ತಿದ್ದಾರೆ.

‘ಬದಲಾದ ಸ್ವರೂಪದಲ್ಲಿ ಮ್ಯಾಗಿ ಯಾವಾಗ ಮಾರುಕಟ್ಟೆ ಪ್ರವೇಶಿಸಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲವಾದರೂ, ಬದಲಿ ಸ್ನ್ಯಾಕ್ಸ್ ಪರಿಚಿಯಿಸಲು ನೆಸ್ಟ್ಲೆ ಕಾರ್ಯತಂತ್ರ ರೂಪಿಸಿದೆ,’ ಎಂದು ಮೂಲಗಳು ತಿಳಿಸಿವೆ.

ಸ್ನ್ಯಾಕಿಂಗ್‌ ಉದ್ಯಮ ನೆಸ್ಟ್ಲೆಗೆ ಅತ್ಯಂತ ಲಾಭದಾಯಿಕವಾಗಿದ್ದು, ಯಾವುದೇ ಕಾರಣಕ್ಕೂ ಮಾರುಕಟ್ಟೆಯಿಂದ ಅದು ಹೊರನಡೆಯುವುದಿಲ್ಲ. ತನ್ನ ಹಿಂದಿನ ಜನಪ್ರಿಯತೆ ಹಾಗೂ ಮಾರುಕಟ್ಟೆ ತಂತ್ರವನ್ನು ಬಳಸಿಕೊಂಡು ಮತ್ತೆ ಮಾರುಕಟ್ಟೆ ಪ್ರವೇಶಿಸಲು ನೆಸ್ಟ್ಲೆ ಎಲ್ಲ ತಯಾರಿ ನಡೆಸುತ್ತಿದೆ. ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಆಗಲಿರುವ ಮ್ಯಾಗಿ ರೆಡಿ ಟು ಈಟ್‌ ಅಥವಾ ರೆಡಿ ಟು ಕುಕ್‌ ಮಾದರಿಯಲ್ಲಿ ಇರಬಹುದು ಎನ್ನಲಾಗಿದೆ.

‘ಗ್ರಾಹಕರ ನಿರೀಕ್ಷಗೆ ತಕ್ಕಂತೆ ಆಹಾರ ಪೂರೈಸಲು ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಸದ್ಯ ಪರಿಶೀಲಿಸುತ್ತಿದ್ದೇವೆ. ಗುಣಮಟ್ಟದ ಖಾತ್ರಿಯೊಂದಿಗೆ ಸಾಧ್ಯವಾದಷ್ಟು ಬೇಗೆ ಮಾರುಕಟ್ಟೆಗೆ ವಾಪಸಾಗುವುದು ನಮ್ಮ ಗುರಿ ,’ ಎಂದು ನೆಸ್ಟ್ಲೆ ವಕ್ತಾರರು ತಿಳಿಸಿದ್ದಾರೆ.

ಲಾಭದಿಂದ ನಷ್ಟಕ್ಕೆ:

ನೆಸ್ಲೆಯ ಮ್ಯಾಗಿ ನೂಡಲ್ಸ್ ಹಿಂಪಡೆಯುವ ಮುನ್ನವೇ ಮೇ ತಿಂಗಳಲ್ಲಿ ದೇಶದಲ್ಲಿ 19,800 ಮಳಿಗೆಗಳನ್ನು ನೂಡಲ್ಸ್‌ ಮಾರಾಟ ಸ್ಥಗಿತಗೊಳಿಸಿದ್ದವು.

ಸೀಸ ಹಾಗೂ ಮೋನೊಸೋಡಿಯಂ ಗ್ಲುಟಮೇಟ್‌ನ ಅಧಿಕ ಅಂಶ ಪತ್ತೆಯಾಗುವ ಮುನ್ನ ಎರಡು ನಿಮಿಷದಲ್ಲಿ ತಯಾರಾಗುವ ಮ್ಯಾಗಿ ಸೇರಿದಂತೆ ನೂಡಲ್ಸ್‌ಗಳ ಮಾರಾಟದಲ್ಲಿ ಭಾರತ ಜಗತ್ತಲ್ಲೇ ನಂ.5ನೇ ಸ್ಥಾನದಲ್ಲಿತ್ತು. ದೇಶದಲ್ಲಿ ಅದು 3,800 ಕೋಟಿ ರೂ. ಮೌಲ್ಯದ ಉದ್ದಿಮೆಯಾಗಿತ್ತು. ಆದರೆ ಜೂನ್‌ನಲ್ಲಿ ನೂಡಲ್ಸ್‌ ಅತಿ ಕಡಿಮೆ ವಿತರಣೆಯಾದ ಗ್ರಾಹಕ ವಸ್ತುಗಳ ಪಟ್ಟಿಗೆ ಸೇರಿದೆ ಎಂದು ಮತ್ತೊಂದು ನೂಡಲ್ಸ್ ತಯಾರಕ ಕಂಪನಿಯ ಅಧಿಕಾರಿ ಹೇಳಿದ್ದಾರೆ.

ಮ್ಯಾಗಿ ನೂಡಲ್ಸ್‌ ಮಾರಾಟ ನಿಷೇಧಿಸಿರುವ ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಪ್ರಾಧಿಕಾರದ ನಿರ್ಧಾರವನ್ನು ವಿರೋಧಿಸಿ ನೆಸ್ಟ್ಲೆ ಇಂಡಿಯಾ ಜು.11ರಂದು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

Write A Comment