ಕರ್ನಾಟಕ

ಕೊಚಾಡಿಯನ್ ಚಿತ್ರ ಸಂಬಂಧ ನಕಲಿ ದಾಖಲೆ ಸಲ್ಲಿಸಿದ ಆರೋಪ; ರಜನಿಕಾಂತ್ ಪತ್ನಿ ಲತಾ ವಿರುದ್ಧ ದೂರು

Pinterest LinkedIn Tumblr

rajinikanth

ಬೆಂಗಳೂರು: ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿ ಬಿಡುಗಡೆ ನಂತರ ಮಖಾಡೆ ಮಲಗಿದ್ದ ತಮಿಳಿನ ಕೊಚಾಡಿಯನ್ ಚಿತ್ರ ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬಕ್ಕೆ ಚಿನ್ನದ ಸೂಜಿಯಾಗಿದೆ.

ಚೆನ್ನೈ ಮೂಲದ ಪೋಸ್ಟ್ ಪ್ರೊಡಕ್ಷನ್ ಕಂಪನಿಯೊಂದು ಕೊಚಾಡಿಯನ್ ಚಿತ್ರ ಸಂಬಂಧ ನಕಲಿ ದಾಖಲೆ ಸಲ್ಲಿಸಿದ ಆರೋಪದಡಿಯಲ್ಲಿ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

2014 ಮೇ ತಿಂಗಳಿನಲ್ಲಿ ಕೊಚಾಡಿಯನ್ ಸಿನಿಮಾ ರಿಲೀಸ್ ಆಗಿತ್ತು. ಆದರೆ ರಜನಿಯ ಈ ಬಹಿನಿರೀಕ್ಷಿತ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿತ್ತು. ರಜನಿ ಪುತ್ರಿ ಸೌಂದರ್ಯ ಈ ಸಿನಿಮಾದ ನಿರ್ದೇಶಕಿ. ಕೆಎಸ್ ರವಿಕುಮಾರ್ ಕಥೆ, ಸಿನಿಮಾದಲ್ಲಿ ರಜನಿಕಾಂತ್, ದೀಪಿಕಾ ಪಡುಕೋಣೆ ನಟಿಸಿದ್ದರು.

Write A Comment