ಕರ್ನಾಟಕ

ಅಂಬಿಗೆ ಅಗೌರವ: ಕಲಾವಿದರ ಸಂಘ ತೀವ್ರ ಆಕ್ರೋಶ

Pinterest LinkedIn Tumblr

Ambarish

ಬೆಂಗಳೂರು: ನಿರ್ಮಾಪಕರ ಸಭೆಯಲ್ಲಿ ನಟ ಅಂಬರೀಶ್ ಅವರಿಗೆ ಅಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾವಿದರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಗೌರವ ತೋರಿದ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ತಾವು ಸಭೆಗೆ ಹಾಜರಾಗುವುದಿಲ್ಲ ಎಂದು ಕಲಾವಿದರ ಸಂಘ ಸ್ಪಷ್ಟಪಡಿಸಿದೆ.

ನಿರ್ಮಾಪಕ ಮತ್ತು ಕಲಾವಿದರ ನಡುವೆ ಭುಗಿಲೆದ್ದಿದ್ದ ವಿವಾದ ಸಂಬಂಧ ವಸತಿ ಸಚಿವ ಮತ್ತು ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಕೆಲ ನಿರ್ಮಾಪಕರು ಅಂಬರೀಶ್ ಅವರ ವಿರುದ್ಧವೇ ಘೋಷಣೆಗಳನ್ನು ಕೂಗಿದ್ದರು. ಅಲ್ಲದೆ ಅವರಿಗೆ ಅಗೌರ ತೋರಿದ್ದು, ಅವರಿಗೆ ದಿಕ್ಕಾರ ಕೂಗಿದ್ದಾರೆ. ಇದೀಗ ಅಂಬರೀಶ್ ಅವರಿಗೆ ಅಗೌರವ ತೋರಿದ ನಿರ್ಮಾಪಕರನ್ನು ವಜಾ ಮಾಡುವಂತೆ ಸಂಘದ ಕಾರ್ಯದರ್ಶಿ (ಹಿರಿಯ ನಿರ್ಮಾಪಕ) ರಾಕ್ ಲೈನ್ ವೆಂಕಟೇಶ್ ಹೇಳಿದ್ದು, ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳುವರೆಗೂ ತಾವೂ ಸಭೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಹಿರಿಯ ನಟ ದೊಡ್ಡಣ್ಣ ಅವರು, “ಡಾ.ರಾಜ್ ಕುಮಾರ್ ಇದ್ದಾಗಲೂ ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಅಂಬರೀಶ್ ಸ್ಪಂದಿಸುತ್ತಿದ್ದರು. ಈಗ ಕೆಲವು ನಿರ್ಮಾಪಕರು ಏಕಾಏಕಿ ಅಂಬರೀಶ್ ಅವರಿಗೆ ದಿಕ್ಕಾರ ಹಾಕಿದರೆ ಹೇಗೆ? ಹಾಗಾಗಿ ವಾಣಿಜ್ಯ ಮಂಡಳಿ ಮೊದಲು ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಟ ಜಗ್ಗೇಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಂಬರೀಶ್ ರನ್ನು ಕೆಲವರು ಅಪಮಾನ ಮಾಡಿದ್ದರಿಂದ ಅಪಮಾನಿಸಿದವರನ್ನು ದೊರ ಇಡುವವರೆಗೂ ಮಾತುಕತೆಗೆ ಬರದಿರಲು ಕಲಾವಿದರ ನಿರ್ಧಾರ “ಆತುರಗಾರನಿಗೆ ಬುಧ್ಧಿ ಮಟ್ಟ” ತಾಳ್ಮಇರಬೇಕು. ಆಗುವ ಕೆಲಸಕ್ಕಿಂತ ಅಧಿಕಪ್ರಸಂಗ ಚಿತ್ರರಂಗಕ್ಕೆ ದಾರಿತಪ್ಪಿಸುತ್ತಿದೆ. ಪ್ರಾಮಾಣಿಕತೆ ವ್ಯರ್ಥವಾಗಿದಕ್ಕೆ ದುಃಖ್ಖವಾಯಿತು. ಅದಕ್ಕೆ ಹೇಳೊದು ಹಿರಿಯರನ್ನು ಗೌರವಿಸಿ ಅಂತ..:) ಎಂದು ಹೇಳಿದ್ದಾರೆ.

Write A Comment