ಮನೋರಂಜನೆ

ವಸೀಂ ಅಕ್ರಂ ದಾಖಲೆ ಮುರಿದ ಭಜ್ಜಿ

Pinterest LinkedIn Tumblr

harbhajan-singh

ಫಾತುಲ್ಲಾ: ಬಾಂಗ್ಲಾದೇಶದ ವಿರುದ್ಧ ಫಾತುಲ್ಲಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ದಾಖಲೆಯೊಂದನ್ನು ಬರೆದಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ವಸೀಂ ಅಕ್ರಂ ಗಳಿಸಿದ್ದ ಅತಿ ಹೆಚ್ಚು ವಿಕೆಟ್ ದಾಖಲೆಯನ್ನು ಮುರಿದಿದ್ದಾರೆ.

ಬಾಂಗ್ಲಾದೇಶ ಪ್ರವಾಸದಲ್ಲಿನ ಏಕೈಕ ಟೆಸ್ಟ್ ಪಂದ್ಯ ಮಳೆಯಿಂದಾಗಿ ನೀರಸ ಡ್ರಾದಲ್ಲಿ ಅಂತ್ಯವಾದರೂ, ಬಹಳ ದಿನಗಳ ಬಳಿಕ ಟೀಂ ಇಂಡಿಯಾಗೆ ಪುನರ್ ಪ್ರವೇಶ ಪಡೆದಿರುವ ಹರ್ಭಜನ್ ಸಿಂಗ್ ಅವರಿಗೆ ಪುನರ್ ಜನ್ಮ ನೀಡಿದೆ ಎಂದು ಹೇಳಬಹುದು. ಏಕೆಂದರೆ ಫಾತುಲ್ಲಾ ಟೆಸ್ಟ್ ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಹರ್ಭಜನ್ ಸಿಂಗ್ ಪಾಕ್ ಮಾಜಿ ಆಟಗಾರ ವಸೀಂ ಅಕ್ರಮ ಅವರ ದಾಖಲೆಯನ್ನು ಹಿಂದಕ್ಕೆ ಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ವಸೀಂ ಅಕ್ರಂ 414 ವಿಕೆಟ್ ಗಳನ್ನು ಕಬಳಿಸಿದ್ದ ದಾಖಲೆ ಹೊಂದಿದ್ದರು.

ಆದರೆ ಫಾತುಲ್ಲಾ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ 3 ವಿಕೆಟ್ ಗಳನ್ನು ಕಬಳಿಸುವ ಮೂಲಕ ತಮ್ಮ ವಿಕೆಟ್ ಗಳ ಸಂಖ್ಯೆಯನ್ನು 416ಕ್ಕೆ ಏರಿಸಿಕೊಂಡಿದ್ದಾರೆ. ಆ ಮೂಲಕ ಪಾಕಿಸ್ತಾನ ಮಾಜಿ ಆಟಗಾರ ಮಾಡಿದ್ದ ದಾಖಲೆಯನ್ನು ಅವರು ಮುರಿದಿದ್ದಾರೆ. ಅಲ್ಲದೆ ಇನ್ನು ಕೇವಲ 6 ವಿಕೆಟ್ ಗಳನ್ನು ಗಳಿಸಿದರೆ ಹರ್ಭಜನ್ ದಕ್ಷಿಣ ಆಫ್ರಿಕಾದ ಮಾಜಿ ಆಟಗರಾ ಶಾನ್ ಪೊಲಾಕ್ (421 ವಿಕೆಟ್)ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಪ್ರಸ್ತುತ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಶೇನ್ ವಾರ್ನ್ 702 ವಿಕೆಟ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 619 ವಿಕೆಟ್ ಗಳನ್ನು ಕಬಳಿಸಿರುವ ಭಾರತ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ 3ನೇ ಸ್ಥಾನದಲ್ಲಿದ್ದಾರೆ.

Write A Comment