ಕರ್ನಾಟಕ

ರಸ್ತೆ ಸಾರಿಗೆ ನಿಗಮಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Pinterest LinkedIn Tumblr

ksrtc

ಬೆಂಗಳೂರು, ಜೂ.10-ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಸ್ಟಾಪ್‌ಡ್ಯೂಟಿ ನೋಟಾ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಇಟಲಿ ದೇಶದ ಮಿಲಾನ್‌ನಗರದಲ್ಲಿ ನಡೆದ 61ನೇ ಯುಐಟಿಪಿ ವಿಶ್ವ ಕಾಂಗ್ರೆಸ್ ಸಮ್ಮೇಳನದಲ್ಲಿ ಅಧ್ಯಕ್ಷರಾದ ಸರ್ ಪೀಟರ್‌ಹೆಂಡಿ, ಲಂಡನ್ ಸಾರಿಗೆ ಆಯುಕ್ತ ಮಾರೆಸ್‌ಚುಯಾಂಗ್ ಅವರು ಪ್ರದರ್ಶನ ಮಾಡಿದರು.

ಸಾರಿಗೆ ನಿಗಮವು ಒಂದು ಕಾರ್ಮಿಕ ಸಮೂಹವನ್ನು ಹೊಂದಿರುವ ಸಂಸ್ಥೆಯಾಗಿದ್ದು, ಸುಮಾರು 37,381 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಕರ್ತವ್ಯ ನಿಯೋಜನೆ ಮತ್ತು ರಜೆ ನಿರ್ವಹಣೆ ಹಂಚಿಕೆಯೂ ಬಹಳ ಸೂಕ್ಷ್ಮವಾಗಿದ್ದು, ಅತ್ಯಂತ ಪಾರದರ್ಶಕತೆಯಿಂದ ಮತ್ತು ವಸ್ತುನಿಷ್ಟವಾಗಿ ನಿಭಾಯಿಸುವ ವಿಷಯವಾಗಿರುತ್ತದೆ.

ನಿಗಮದಲ್ಲಿ ಪ್ರತಿದಿನ ಕಾರ್ಮಿಕರಿಗೆ ಶೇ.9ರಷ್ಟು ರಜೆ , ಶೇ.17ರಷ್ಟು ವಾರದರಜೆ, ಶೇ.10ರಷ್ಟು ತುರ್ತು ರಜೆ ಉಳಿದ ಶೇ.64ರಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಲಭಿಸಿರುತ್ತಾರೆ. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ರಜೆ ನೀಡಲು ಪಕ್ಷಪಾತ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಘಟಕದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ,  ಸ್ವಜನ ಪಕ್ಷಪಾತ  ಇತ್ಯಾದಿಗಳಿಗೆ ಕಡಿವಾಣ ಹಾಕಲು ತಂತ್ರಜ್ಞಾನ ಆಧಾರಿತ ಪಾರದರ್ಶಕ ವ್ಯವಸ್ಥೆಯ ಅವಶ್ಯಕತೆಯನ್ನು ಅರಿತು ಸಾರಿಗೆ ನಿಗಮ ಸ್ಟಾಪ್‌ಡ್ಯೂಟಿ ನೋಟಾ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ವ್ಯವಸ್ಥೆಯಲ್ಲಿ ಸಿಬ್ಬಂದಿಗಳ ಸೇವಾ ಹಿರಿತನದ ಆಧಾರ ಮತ್ತು ವೈಯಕ್ತಿಕ ಸಮಾಲೋಚಲನೆಯ ಮೇಲೆ ಪ್ರತಿ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ವ್ಯವಸ್ಥೆ ಇದಾಗಿದ್ದು, ಪಾರದರ್ಶಕವಾಗಿ ಸಿಬ್ಬಂದಿಗಳು ಕರ್ತವ್ಯಕ್ಕೆ ನಿಯೋಜನೆಯಾಗುತ್ತಾರೆ ಹಾಗೂ ದಿಢೀರ್ ಮಾರ್ಗ ರದ್ದತಿಗೆ ಅವಕಾಶ ಇಲ್ಲದಂತೆ ಪ್ರಯಾಣಿಕರಿಗೆ ಸೇವೆ ಒದಗಿಸಲು ಸಹಕಾರಿಯಾಗುತ್ತದೆ.

Write A Comment