ರಾಷ್ಟ್ರೀಯ

ಆನ್‌ಲೈನ್‌ ನಲ್ಲೇ ನಿಮ್ಮಿಷ್ಟದ ಮಗು ಕೊಂಡುಕೊಳ್ಳಿ ..!

Pinterest LinkedIn Tumblr

baby

ನವದೆಹಲಿ,ಜೂ.10- ಮಕ್ಕಳಿಲ್ಲದ ದಂಪತಿ,  ಇಲ್ಲಿನ ರಾಷ್ಟ್ರೀಯ ಜನಹಿತ ಜನಸೇವಾ ಸಂಸ್ಥಾನ್(ಆರ್‌ಜೆಜೆಎಸ್) ಎಂಬ ಸಂಸ್ಥೆಯಲ್ಲಿ ನಿಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದರಾಯಿತು. ಅವರು ಕರೆದಾಗ ಹೋಗಿ ಕೇವಲ ಒಂದು ವಾರ ಅಲ್ಲಿನ ಆಸ್ಪತ್ರೆಯಲ್ಲಿದ್ದು, ಅವರು ಹೇಳಿದ ಷರತ್ತುಗಳಿಗೆ  ಒಪ್ಪಿಬಿಟ್ಟರೆ ಆ ದಂಪತಿ ತನಗಿಷ್ಟವಾದ

ಹೆಣ್ಣು ಅಥವಾ ಗಂಡು)ಬಣ್ಣದ ಮಗುವಿನೊಂದಿಗೆ ವಾಪಸ್ ಮನೆಗೆ ಬರಬಹುದು.  ದ್ವಾರಕಾ ಮೂಲದ ಆರ್‌ಜೆಜೆಎಸ್ ಒಂದು ಎನ್‌ಜಿಒ(ಸರ್ಕಾರೇತರ) ಸಂಸ್ಥೆ. ಇದನ್ನು ನಡೆಸುತ್ತಿರುವವರು ಇಬ್ಬರು ಪುರುಷರು ಮತ್ತು ಒಬ್ಬ ಪುರುಷ. ಈಗಾಗಲೇ ಅನೇಕ ಜೋಡಿಗಳು ಇಲ್ಲಿ ಈ ರೀತಿ ಮಗುಗಳನ್ನು ಪಡೆದಿದ್ದಾರೆ. ಸಂಸ್ಥೆಯ ಒಪ್ಪಂದದ ಪ್ರಕಾರ ತಾವು ಮಗು ಪಡೆದ ಬಗೆಯನ್ನು  ಅವರು ಯಾರಿಗೂ ಹೇಳುವಂತಿಲ್ಲ. ಸಂಸ್ಥೆಯ ಬಗ್ಗೆ ಅನುಮಾನಗೊಂಡ ಕೆಲವರು ಪೊಲೀಸರಿಗೆ ತಿಳಿಸಿದ್ದಾರೆ.

ಈ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದಾಗ ಎರಡು ತಿಂಗಳ ಮಗುವೊಂದು ಪತ್ತೆಯಾಗಿದ್ದು , ಮಗುವನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ತನಿಖೆಗೊಳಪಡಿಸಿದಾಗ ಹೊರಬಂದದ್ದೇ ಮುಂದಿನ ಈ ಕಥೆ.   ಮಕ್ಕಳಿಲ್ಲದೆ ಕೊರಗುವ ಶ್ರೀಮಂತ ದಂಪತಿಗೆ ಮಕ್ಕಳನ್ನು ನೀಡುವ ಬಗ್ಗೆ ಇವರು ಭಾರೀ ಪ್ರಚಾರವನ್ನೆ ಮಾಡುತ್ತಾರೆ. ಕರಪತ್ರ ಮಾಡಿ ಹಂಚುತ್ತಾರೆ. ತಮ್ಮ ಬಳಿ ಇರುವ ದಂಪತಿಗೆ ಅವರ ಆದ್ಯತೆಗೆ ತಕ್ಕಂತಹ ಮಕ್ಕಳನ್ನು ನೀಡುತ್ತಾರೆ. ಮಕ್ಕಳಿಲ್ಲದವರು ಖುಷಿಯಿಂದ ತಮಗೆ ಬೇಕಾದ ಮಕ್ಕಳನ್ನು ಎತ್ತಿಕೊಂಡು ನಗುನಗುತ್ತಾ ಮನೆಗೆ ಹೋಗುತ್ತಾರೆ.  ಈ ಸಂಸ್ಥೆಯು ಕಿಂಗ್‌ಪಿನ್  42 ವರ್ಷದ ವಿನೋದ್‌ಕುಮಾರ್. ಇನ್ನಿಬ್ಬರು 28ರ ಶಿಕ್ಷಾ ಚೌಧುರಿ, 29ರ ಅನಿಲ್ ಪಾಂಡೆ. ಇದೊಂದು ನೋಂದಣಿ ರಹಿತ ಸಂಸ್ಥೆ. ದಂಪತಿಯ ಮನವೊಲಿಸುವುದು ವಿನೋದ್‌ಕುಮಾರ್ ಕೆಲಸ. ಮಕ್ಕಳನ್ನು ಒದಗಿಸುವ ಹೊಣೆ ಉಳಿದಿಬ್ಬರಿಗೆ. 10 ಸಾವಿರ ರೂ. ಪ್ರವೇಶ ಶುಲ್ಕ ನೀಡಿ ಹೆಸರು ನೋಂದಾಯಿಸಿದ ದಂಪತಿಯನ್ನು ಒಂದು ವಾರ ತಮ್ಮಲ್ಲೇ ಇರಿಸಿಕೊಂಡು, ಅವರು ನಿಜಕ್ಕೂ ಮಗು ಬಯಸುವವರೇ ಅಥವಾ ಪತ್ತೆದಾರಿಕೆ ಮಾಡುವವರೇ  ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ದಂಪತಿ ತಮ್ಮ ಹೆಸರು ನೋಂದಾಯಿಸಿದ ತಕ್ಷಣ ಅವರು ಕೇಳುವಂಥ ಮಗುವಿಗಾಗಿ ಹುಡುಕಾಟ ನಡೆಸಿ, ನರ್ಸಿಂಗ್ ಹೋಮ್‌ಗಳಲ್ಲಿ ಆಗಷ್ಟೇ ಜನಿಸಿದ ಮಗುವನ್ನು ಕದ್ದು ತರುತ್ತಾರೆ. ಬಹುತೇಕ ಬಿಹಾರ, ಜಾರ್ಖಂಡ್, ಉತ್ತರಪ್ರದೇಶದ ಆಸ್ಪತ್ರೆಗಳಲ್ಲಿ  ಇವರ ಮಕ್ಕಳ ಬೇಟೆ ಸಾಗುತ್ತದೆ ಅಥವಾ ದತ್ತುಪುತ್ರ ಸಿದ್ಧವಾಗುತ್ತದೆ.

4-5 ಲಕ್ಷ ರೂ:
ತಮ್ಮ ಸಂಸ್ಥೆ ಆಸ್ಪತ್ರೆಗೆ ತಂದ ಮಗುವನ್ನು ಈ ದಂಪತಿಯ ಮಗು ಎನ್ನುವ ದಾಖಲೆಗಳ ಸೃಷ್ಟಿಯಾಗುತ್ತದೆ. ಗಂಡು ಮಗುವಾದರೆ 5 ಅಥವಾ 5.5 ಲಕ್ಷ ರೂ. ಹೆಣ್ಣು ಮಗುವಾದರೆ 4.5 ಅಥವಾ 5 ಲಕ್ಷ ರೂ.ಗಳು.! ತಾವು ನಿಗದಿಪಡಿಸಿದ ಮೊತ್ತ  ಕೈ ಸೇರುತ್ತಿದ್ದಂತೆಯೇ ಕೇಂದ್ರೀಯ ದತ್ತಕ ಸಂಪನ್ಮೂಲ ಪ್ರಾಧಿಕಾರದ ಚಿಹ್ನೆ ಸೀಲು ಇರುವ ದಾಖಲೆಗಳು ತಯಾರಾಗುತ್ತವೆ.

ನರ್ಸಿಂಗ್ ಹೋಂಗಳ ಜೊತೆ ಒಪ್ಪಂದ:

ಈ ಧೂರ್ತರು ಕನಿಷ್ಠ 10ರಿಂದ 20 ನರ್ಸಿಂಗ್ ಹೋಮ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಹೆಚ್ಚುವರಿ ಡಿಸಿಪಿ ನೂಪುರ್ ಪ್ರಸಾದ್ ನೇತೃತ್ವದಲ್ಲಿ ಒಬ್ಬ ಮಹಿಳಾ ಉದ್ಯೋಗಿ ಮತ್ತು ಇನ್ನೊಬ್ಬರು ಮಕ್ಕಳಿಲ್ಲದ ದಂಪತಿಗಳಂತೆ ನಾಟಕವಾಡಿ ಈ ದಂಧೆಕೋರರನ್ನು ಪತ್ತೆ ಮಾಡಿ ಬಲೆಗೆ ಬೀಳಿಸಿದ್ದಾರೆ.  ಈ ಜಾಲ ಕೆಲವೊಮ್ಮೆ ಬಾಡಿಗೆ ತಾಯಂದಿರನ್ನೂ ಬಳಸಿಕೊಳ್ಳುತ್ತಿತ್ತು. ಆದರೆ ಕದ್ದ ಮಕ್ಕಳೇ ಹೆಚ್ಚು. ದೆಹಲಿ, ಅಲಿಘಡ, ಬುಲಂದ್ ಷಹರ್, ಮೀರತ್, ರಾಂಚಿ  ಆಸ್ಪತ್ರೆಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದರು.   ಇವರ ನಿರ್ದೇಶನಂತೆ ಹುಟ್ಟಿದ ಶಿಶುಗಳನ್ನು ಅಪಹರಿಸಿ ಸಂಸ್ಥೆಗೆ ತರಲಾಗುತ್ತಿತ್ತು.  ಸಂಸ್ಥೆಯ ಆಸ್ಪತ್ರೆಯಲ್ಲಿ ದಂಧೆ ಅಬಾಧಿತವಾಗಿ ನಡೆಯುತ್ತಿತ್ತು.  ಈ ಮೂವರು ಸೆರೆಯಲ್ಲಿದ್ದು, ಅವರ ವಿರುದ್ಧ ಹಲವು ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ ಎಂದು ಜಂಟಿ ಆಯುಕ್ತ ದಿಪೇಂದ್ರ ಪಾಠಕ್ ಹೇಳಿದ್ದಾರೆ.

Write A Comment