ಕರ್ನಾಟಕ

ಮೊಮ್ಮಗಳನ್ನು ಹತ್ಯೆ ಮಾಡಿದ ಪಾಪಿ ಅಜ್ಜ

Pinterest LinkedIn Tumblr

murder1

ಚಿತ್ರದುರ್ಗ, ಜೂ.9: ಕುತ್ತಿಗೆಗೆ ವೈಯರ್ ಬಿಗಿದು ಮೊಮ್ಮಗಳನ್ನೇ ಅಜ್ಜ ಕೊಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಗೆರೆ ಪಟ್ಟಣದಲ್ಲಿ ಸೋಮವಾರ ನಡೆದಿದೆ. ತನ್ನ ಮಗಳ ಮಗಳನ್ನೇ ಕೊಲೆ ಮಾಡಲು ಕಾರಣವೇನು ಎಂಬುದು ಗೊತ್ತಾಗಿಲ್ಲ.

ಹೆತ್ತಮ್ಮನ ತಂದೆಯಿಂದಲೇ ಹತ್ಯೆಯಾದ ಮಗುವಿನ ಹೆಸರು ಸೃಷ್ಠಿ. ಈಕೆಗೆ ಕೇವಲ 4 ವರ್ಷ ವಯಸ್ಸಾಗಿತ್ತು. ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆ ಚಳ್ಳಗೆರೆ ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿರುವ ಮನೆಯಲ್ಲಿ.

ಆದರೆ, ಕೊಲೆಗಡುಕ ತಾತನ ದುಷ್ಕೃತ್ಯಕ್ಕೆ ಬಲಿಯಾದ ಮಗುವಿನ ವಯಸ್ಸು ಮಾತ್ರ ಕೇವಲ ನಾಲ್ಕು ಎಂಬುದೇ ದುರ್ದೈವದ ಸಂಗತಿ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಳ್ಳಗೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment