ಕರ್ನಾಟಕ

14 ವರ್ಷಗಳಿಂದ ತಮ್ಮ ಒಡನಾಡಿಯಾಗಿದ್ದ ನಾಯಿ ಸಾವು; ಮೊಮ್ಮಗನಿಗೆ ಮೆಚ್ಚಿನ ನಾಯಿ ಹೆಸರಿಟ್ಟ ಜಗ್ಗೇಶ್

Pinterest LinkedIn Tumblr

dog

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರ ಪ್ರೀತಿಯ ನಾಯಿ ಭಾನುವಾರ ಕೊನೆಯುಸಿರೆಳೆದಿದೆ. 14 ವರ್ಷಗಳಿಂದ ತಮ್ಮ ಒಡನಾಡಿಯಾಗಿದ್ದ, ಮಗನಂತೆ ಪ್ರೀತಿಸಿದ್ದ ಅರ್ಜುನ್‌ನನ್ನು ಕಳೆದುಕೊಂಡು ಜಗ್ಗೇಶ್ ಅವರು ತೀವೃ ಆಘಾತಕ್ಕೊಳಗಾಗಿದ್ದಾರೆ. ಜತೆಗೆ ಕಳೆದ ವಾರವಷ್ಟೇ ಜನಿಸಿದ ತಮ್ಮ ಮೊಮ್ಮಗನಿಗೆ ಅರ್ಜುನ್ ಎಂದು ನಾಮಕರಣ ಮಾಡುವುದರ ಮೂಲಕ ತಮ್ಮ ಒಲವಿನ ನಾಯಿಗೆ ಅವರು ಗೌರವ ಅರ್ಪಿಸಿದ್ದಾರೆ.

ಅರ್ಜುನ್‌ನನ್ನು ಕಳೆದುಕೊಂಡಿರುವ ಜಗ್ಗೇಶ್ ಅತೀವ ಆಘಾತಕ್ಕೊಳಗಾದ್ದಾರೆ.ಆತ ಅವರ ಜೀವನದ ಬಹುಮುಖ್ಯ ಭಾಗವಾಗಿದ್ದ.  ಬೆಳಿಗ್ಗೆ ಎದ್ದು ಅರ್ಜುನ್ ಜತೆ ಸಮಯ ಕಳೆಯುತ್ತಿದ್ದ ಅವರು ಕೆಲವೊಮ್ಮೆ ಶೂಟಿಂಗ್ ಸಮಯದಲ್ಲಿ ಕೂಡ ಅವನನ್ನು ಜತೆಗೆ ಕರೆತರುತ್ತಿದ್ದರು.

ಚಿತ್ರೀಕರಣ ಮುಗಿಸಿ ಮನೆಗೆ ಬರುತ್ತಿದ್ದಂತೆ ಸ್ವಾಗತ ಕೋರುತ್ತಿದ್ದ ಅರ್ಜುನ್ ಜಗ್ಗೇಶ್ ಅವರನ್ನು ಅಗಲಿ ಇರಲಾಗುತ್ತಿರಲಿಲ್ಲ. ನವರಸನಾಯಕನ ಕುಟುಂಬದ ಭಾಗವಾಗಿದ್ದ ಅರ್ಜುನ್ ನಿನ್ನೆ ಕಾಣದ ಲೋಕಕ್ಕೆ ಹೊರಟು ಹೋಗಿದ್ದಾನೆ. ತಮ್ಮ ಪ್ರೀತಿಯ ಅರ್ಜುನ್ ಅಗಲಿಕೆಯಿಂದ ಜಗ್ಗೇಶ್ ದುಃಖತಪ್ತರಾಗಿದ್ದು ತಮ್ಮ ಮತ್ತು ಅರ್ಜುನ್ ಬಾಂಧವ್ಯದ ಕುರಿತು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಅವರ ಪೋಸ್ಟಿಂಗ್ ಈ ಮುಂದಿನಂತಿದೆ: “14 ವರ್ಷದ ಬಾಂಧವ್ಯ ಇಂದು ಕೊನೆಯಾಯಿತು. ಅರ್ಥವಾಗದವರಿಗೆ ಇದು ಸಾಮಾನ್ಯ ನಾಯಿ… ಅರ್ಥವಾದವರಿಗೆ ದೇವರು ಕಳಿಸಿಕೊಟ್ಟ ಅನುಭವಕ್ಕೂ ನಿಲುಕದ ಪ್ರೀತಿಯ ಸಂಕೇತ… ನಾನು ಏಕಾಂಗಿಯಾಗಿ ಇರಲು ಬಯಸುವ ಮನುಷ್ಯ… ಆದರೆ ಇವನು ಈ 14 ವರ್ಷ ನನ್ನ ಏಕಾಂಗಿತನ ನೀಗಿದವ. ನನ್ನ ಅನಿಸಿಕೆ ರಾಯರೆ ಇವನನ್ನು ನನಗಾಗಿ ಕಳಿಸಿದ್ದು ಅನ್ನಿಸುತ್ತಿದೆ… ಯಾರಿಗೂ ಅರ್ಥವಾಗದ ಸತ್ಯ. ಜೂನ್ 1ನೇ ತಾರೀಖು ಮೊಮ್ಮಗ ಹುಟ್ಟಿದ, ಮಗನಿಗೆ ಏನು ಹೆಸರಿಡೋಣ ಅಂತ ಕೇಳಿದೆ ಅದಕ್ಕೆ ಮಗ ಅಪ್ಪ “ಅರ್ಜುನ್” ನಮ್ಮನ್ನೆಲ್ಲ ಆವರಿಸಿಕೊಂಡಿದ್ದಾನೆ ಅವನ ಹೆಸರೇ ನನ್ನ ಮಗನಿಗೆ ಇಡುತ್ತೇನೆ ಎಂದು ಹೇಳಿ ಮಗನನ್ನು “ಅರ್ಜುನ್” ಅಂತ ಕರೆದ… ಇಂದಿಗೆ ಅಂದರೆ 7ನೇ ದಿನಕ್ಕೆ ಈ ಅರ್ಜುನ ನಮ್ಮನ್ನು ಬಿಟ್ಟು ಹೋದ… ಅಂದರೆ ಇದರ ಅರ್ಥ ಅತೀ ಪ್ರೀತಿಸುವ ಮನೆಯಲ್ಲಿ ಅವನ ಹೆಸರು ಶಾಶ್ವತ ಗೊಳಿಸಿರುವುದು… ಆ ಹೆಸರು ನಮ್ಮ ಮನೆಗೆ ನೀಡಿದ ರಾಯರಿಗೆ ವಂದನೆ ಅರ್ಪಿಸಿ ಭಾರದ ಹೃದಯದಿಂದ ಅವನನ್ನು ಕಳಿಸುತ್ತೇನೆ… ಒಂದೇ ಒಂದು ಬಾರಿ ಅವನಿಗಾಗಿ… I Loveeeeee uuuu Arjun… gd bye”.

Write A Comment