ಕರ್ನಾಟಕ

ಮಾಧ್ಯಮಗಳಲ್ಲಿ ಮಿಂಚುವ ಮೂಲಕ ದೊಡ್ಡ ಜನ ಆಗಲು ಬಸ್ಸನ್ನೇ ಹೈಜಾಕ್ ಮಾಡಿದ ಭೂಪ ! ಮಚ್ಚು ತೋರಿಸಿ ಸಿನಿಮೀಯ ರೀತಿಯಲ್ಲೇ ಅಪಹರಿಸಿ ಕೊನೆಗೂ ಪೋಲೀಸರ ಅತಿಥಿಯಾದ

Pinterest LinkedIn Tumblr

aaropi

ವಿಜಯಪುರ: ಮಾಧ್ಯಮಗಳಲ್ಲಿ ನಾನು ಫುಲ್ ಮಿಂಚಬೇಕು. ಸುದ್ದಿಯನ್ನು ಪ್ರಕಟಿಸಿದ ಮೇಲೆ ರಾಜ್ಯದಲ್ಲಿ ನಾನು ಶೈನ್ ಆಗಬೇಕೆಂಬ ಆಸೆಯಿಂದ ವ್ಯಕ್ತಿಯೊಬ್ಬ ಬಸ್ಸನ್ನೇ ಅಪಹರಿಸಿ ಈಗ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅಪಹರಿಸಿದ್ದು ಹೇಗೆ ಎಂದು ಕೇಳಿದರೆ ನಿಮಗೂ ಶಾಕ್ ಆಗಬಹುದು. ಸಿನಿಮಾಗಳಲ್ಲಿ ಹೇಗೆ ಮಚ್ಚು ತೋರಿಸು ಹೆದರಿಸುತ್ತಾರೋ ಅದೇ ರೀತಿಯಾಗಿ ಡ್ರೈವರ್ ಮತ್ತು ಪ್ರಯಾಣಿಕರಿಗೆ ಮಚ್ಚು ತೋರಿಸಿ ಅವರನ್ನು ಇಳಿಸಿ 15 ಕಿ.ಮೀ ದೂರದವರೆಗೆ ಬಸ್ಸನ್ನು ಚಲಾಯಿಸಿದ್ದಾನೆ.

ಏನಿದು ಘಟನೆ? ಶುಕ್ರವಾರ ಬೆಳಗ್ಗೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಚಡಚಣ ಬಳಿ ಸಾತಲಗಾಂವ ಬಳಿ ಈ ಘಟನೆ ನಡೆದಿದೆ. ನಿಂಗಪ್ಪ ವಾಘಮೋರೆ ಎಂಬಾತನ ಈ ವಿಚಿತ್ರ ಪ್ರತಾಪ ನಡೆಸಿದ ವ್ಯಕ್ತಿ. ಇಂಡಿ ಸಾರಿಗೆ ಡಿಪೋಗೆ ಸೇರಿದ ಬಸ್ಸು ಬೆಳಗ್ಗೆ 6 ಗಂಟೆಗೆ ಜಿಗಜೇವಣಿಗೆ ಗ್ರಾಮದಿಂದ ಸಾತಲಗಾಂವ ಗ್ರಾಮಕ್ಕೆ ಹೊರಟಿತ್ತು. ಬಸ್ಸು ಸಾತಲಂಗಾವ ಬಸ್ಸು ನಿಲ್ದಾಣ ತಲುಪುವ ಸ್ವಲ್ಪವೇ ದೂರ ಇರುವಾಗ ಈತ ರಸ್ತೆಗೆ ಅಡ್ಡವಾಗಿ ಕಲ್ಲನ್ನು ಇಟ್ಟು ಬಸ್ಸನ್ನು ತಡೆದಿದ್ದಾನೆ. ಬಸ್ಸು ನಿಂತ ಕೂಡಲೇ ಚಾಲಕನಿಗೆ ಬಸ್ಸಿನಿಂದ ಇಳಿಯುವಂತೆ ಧಮ್ಕಿ ಹಾಕಿದ್ದಾನೆ. ಚಾಲಕ ಒಪ್ಪದೇ ಇದ್ದಾಗ ಮಚ್ಚಿನಿಂದ ಮೊಣಕಾಲಿಗೆ ಹೊಡೆದು ಗಾಯಗೊಳಿಸಿದ್ದಾನೆ. ಅಷ್ಟೇ ಅಲ್ಲದೇ ಮಚ್ಚು ತೋರಿಸಿ 10 ಮಂದಿ ಪ್ರಯಾಣಿಕರು, ಚಾಲಕ, ನಿರ್ವಾಹಕರನ್ನು ಇಳಿಸಿ ಬಸ್ಸನ್ನು ಚಲಾಯಿಸಿದ್ದಾನೆ.

ಅಡ್ಡಾದಿಡ್ಡಿ ಚಲಿಸಿ ಕೊನೆಗೆ ಸಿಕ್ಕಿಬಿದ್ದ: ಬಸ್ಸು ಏರಿದ್ದೆ ತಡ ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ. ಬಸ್ ಅಪಹರಣದ ವಿಚಾರ ಕೂಡಲೇ ಪೊಲೀಸರಿಗೆ ತಿಳಿಸಲಾಗಿದೆ. ನಂತರ ಬರಡೋಲ ಗ್ರಾಮಸ್ಥರ ಸಹಾಯದಿಂದ ಪೊಲೀಸರು ರಸ್ತೆಗೆ ಕಲ್ಲುಗಳನ್ನು ಇಟ್ಟು ಬೆಳಗ್ಗೆ 6.50ರ ವೇಳೆಗೆ ಬಸ್ ನಿಲ್ಲಿಸಿ ವಾಘಮೋರೆಯನ್ನು ವಶಕ್ಕೆ ಪಡೆದಿದ್ದಾರೆ. ಬಸ್ಸು ನಿಂತ ಕೂಡಲೇ ಜನರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹೆಡ್‍ಲೈನ್ ಸುದ್ದಿಗಾಗಿ: ಈ ರೀತಿ ಮಾಡಿದ್ದು ಯಾಕೆ ಎಂದು ಕೇಳಿದ್ದಕ್ಕೆ ಆತ ಪೊಲೀಸರಿಗೆ ಒಂದೊಂದು ಗೊಂದಲದ ಹೇಳಿಕೆ ನೀಡಿದ್ದಾನೆ. ಒಂದು ಬಾರಿ ಪ್ರಿಯತಮೆಗಾಗಿ ಈ ರೀತಿ ಮಾಡಿದ್ದೇನೆ ಎಂದು ಹೇಳಿದರೆ ಮತ್ತೊಮ್ಮೆ ರೌಡಿ ಆಗಬೇಕು ಎನ್ನುವ ಆಸೆ ಇದೆ. ಬಸ್ಸನ್ನು ಹೈಜಾಕ್ ಮಾಡಿದಾಗ ಮಧ್ಯಮಗಳು ನನ್ನ ಸುದ್ದಿಯನ್ನು ದೊಡ್ಡದಾಗಿ ಪ್ರಕಟಿಸುತ್ತದೆ. ಹೀಗಾಗಿ ನಾನು ಫೇಮಸ್ಸಾಗುತ್ತೇನೆ ಎನ್ನುವ ಹೇಳಿಕೆ ನೀಡಿದ್ದಾನೆ.

ಮಾನಸಿಕ ಅಸ್ವಸ್ಥ: ಎಸ್‍ಎಸ್‍ಎಲ್‍ಸಿವರೆಗೆ ಓದಿರುವ ಇವನು ಕೆಲಕಾಲ ಲಾರಿ ಚಾಲಕನಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಮಗ ಯಾಕೆ ಹೀಗೆ ಎಂದು ತಂದೆ ತಾಯಿ ಅವರಲ್ಲಿ ಕೇಳಿದಾಗ ಅವರು ಆತ ಮಾನಸಿಕ ಅಸ್ವಸ್ಥ, ಮದುವೆ ಆಗಿಲ್ಲ ಎನ್ನುವ ಉತ್ತರ ನೀಡಿದ್ದಾರೆ.

Write A Comment