ಕರ್ನಾಟಕ

ಗೋದ್ರೇಜ್ ಪ್ರಾಪರ್ಟಿಸ್‍ನಿಂದ ಬೆಂಗಳೂರಿನಲ್ಲಿ ನೂತನ ವಸತಿ ಯೋಜನೆ

Pinterest LinkedIn Tumblr

godrej

ಬೆಂಗಳೂರು: ಮುಂಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಗೋದ್ರೇಜ್ ಪ್ರಾಪರ್ಟಿಸ್‍ ಈಗ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ನೂತನ ವಸತಿ ಯೋಜನೆಯನ್ನು ಆರಂಭಿಸಲು ಮುಂದೆ ಬಂದಿದೆ.

ಗೋದ್ರೇಜ್ ಪ್ರಾಪರ್ಟಿಸ್ (BSE: GODREJPRP) ಗೋದ್ರೇಜ್ ಸಮೂಹದ ರಿಯಲ್ ಎಸ್ಟೇಟ್ ಡೆವಲಪ್ ಮೆಂಟ್ ವಿಭಾಗವಾಗಿದ್ದು, ಬೆಂಗಳೂರಿನ ಯಲಹಂಕ ಮುಖ್ಯರಸ್ತೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ವಸತಿ ಯೋಜನೆ ಅಭಿವೃದ್ಧಿಪಡಿಸಲು ಪಾಲುದಾರಿಕೆ ಹೊಂದಲು ಮುಂದಾಗಿದೆ.

ಉದ್ದೇಶಿತ ಯೋಜನೆಯು ಅಂದಾಜು 69,800 ಚದರ ಮೀಟರ್ (0.75 ಮಿಲಿಯನ್ ಚದರ ಅಡಿ) ಹೊಂದಿದು, ಇಲ್ಲಿ ಆಧುನಿಕ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಗೋದ್ರೇಜ್ ಪ್ರಾಪರ್ಟೀಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಿರೋಜ್‍ಶಾ ಗೋದ್ರೇಜ್ ಅವರು ತಿಳಿಸಿದ್ದಾರೆ,

ಯಲಹಂಕ, ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕ ಹೊಂದಿದ್ದು, ಸಿಬಿಡಿ ಮತ್ತು ಹೆಬ್ಬಾಳದ ಮುಖ್ಯ ವಾಣಿಜ್ಯ ಪ್ರದೇಶವಾಗಿದೆ. ಈ ಸ್ಥಳವು ಉತ್ತಮ ಸಾಮಾಜಿಕ ಮತ್ತು ಭೌತಿಕ ಅಭಿವೃದ್ಧಿಯನ್ನು ಹೊಂದಿದೆ. ಬಹುತೇಕ ಗೋದ್ರೇಜ್ ಉತ್ಪನ್ನಗಳಂತೆ ಈ ಯೋಜನೆಯನ್ನು ಲಾಭ ಹಂಚಿಕೆ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಹೊಸ ವಸತಿ ಯೋಜನೆ ಆರಂಭಿಸಲು ನಮಗೆ ಸಂತಸವಾಗಿದೆ. ಇದು ನಮ್ಮ ಒಂಬತ್ತನೇ ಯೋಜನೆಯಾಗಿದ್ದು, ಈ ಯೋಜನೆಯು ವಿಶ್ವದರ್ಜೆ ಗುಣಮಟ್ಟದ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತಮ ರಿಯಲ್ ಎಸ್ಟೇಟ್ ರೂಪಕರಾಗಲು ನೆರವಾಗಲಿದೆ ಎಂದು ಶಾ ಹೇಳಿದ್ದಾರೆ.

Write A Comment