ಕರ್ನಾಟಕ

ಜಯಾ ಪ್ರಕರಣದ ವಿಚಾರಣೆಗೆ ಖರ್ಚಾದ 5.11 ಕೋಟಿ ರೂಪಾಯಿ ಕೇಳಲು ಮುಂದಾದ ಕರ್ನಾಟಕ

Pinterest LinkedIn Tumblr

jayalalitha

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗಾಗಿ ಖರ್ಚಾದ 5. 11 ಕೋಟಿ ರುಪಾಯಿ ಮರು ಪಾವತಿ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಕೇಳುವುದಾಗಿ ಗುರುವಾರ ಕರ್ನಾಟಕ ಸರ್ಕಾರ ತಿಳಿಸಿದೆ.

‘ಬೆಂಗಳೂರಿನಲ್ಲಿ ಜಯಾ ಪ್ರಕರಣದ ವಿಚಾರಣೆಗಾಗಿ ಕರ್ನಾಟಕ ಸರ್ಕಾರ ಮಾಡಿದ 5.11 ಕೋಟಿ ರುಪಾಯಿ ವೆಚ್ಚವನ್ನು ಮರು ಪಾವತಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಲಾಗುವುದು’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ಜಯಲಲಿತಾ ಅವರ ಭದ್ರತೆಗಾಗಿ ಗೃಹ ಇಲಾಖೆ ಮಾಡಿದ ವೆಚ್ಚವನ್ನು ಸಹ ಭರಿಸುವಂತೆ ತಮಿಳುನಾಡು ಸರ್ಕಾರಕ್ಕೆ ಕೇಳಲಾಗುವುದು ಎಂದು ಜಯಚಂದ್ರ ಅವರು ಹೇಳಿದ್ದಾರೆ.

ತಮಿಳುನಾಡಿನಲ್ಲಿ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಜಯಲಲಿತಾ ಅವರ ಪ್ರಕರಣವನ್ನು ಸುಪ್ರೀಂ ಕೋರ್ಟ್ ನವೆಂಬರ್ 18, 2003ರಲ್ಲಿ ಬೆಂಗಳೂರಿಗೆ ವರ್ಗಾಯಿಸಿತ್ತು.

Write A Comment