ಕರ್ನಾಟಕ

‘ರನ್ನ’ನನ್ನು ನೋಡಲು ಅಭಿಮಾನಿಗಳಿಂದ ದಾಂಧಲೆ; ಲಾಠಿ ಏಟಿನ ರುಚಿ ತೋರಿಸಿದ ಪೊಲೀಸರು

Pinterest LinkedIn Tumblr

Ranna-Kannada

ಬೆಂಗಳೂರು, ಜೂ.4: ಕಿಚ್ಚ ಸುದೀಪ್ ಅಭಿನಯಿಸಿರುವ ‘ ರನ್ನ ’ ಚಿತ್ರ ಬಿಡುಗಡೆಯ ದಿನವೇ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾಜ್ಯಾದ್ಯಂತ ರನ್ನ ಚಿತ್ರ ಇಂದು ತೆರೆ ಕಂಡಿದೆ. ಆದರೆ ಬೆಳಗಿನ ಪ್ರದರ್ಶನ ಕೆಲವು ಚಿತ್ರಮಂದಿರಗಳಲ್ಲಿ ಸೋಲ್ಡ್‌ಔಟ್ ಆದ ಕಾರಣ ಅಭಿಮಾನಿಗಳು ಆಕ್ರೋಶಗೊಂಡಿದ್ದರು.

ಜೊತೆಗೆ ಪ್ರದರ್ಶನ ಒಂದು ಗಂಟೆಗೂ ಹೆಚ್ಚು ಹೊತ್ತು ಪ್ರಾರಂಭವಾಗದ ಕಾರಣ ಅಭಿಮಾನಿಗಳು ರೊಚ್ಚಿಗೆದ್ದರು. ಕೈಗೆ ಸಿಕ್ಕಿದ ಕಲ್ಲುಗಳನ್ನು ತೆಗೆದು ಚಿತ್ರಮಂದಿರದ ಕಿಟಕಿ, ಬಾಗಿಲುಗಳನ್ನು ಹೊಡೆದು ಹಾಕಿದ್ದಾರೆ. ಬೆಂಗಳೂರಿನ ನರ್ತಕಿ, ಚಾಮರಾಜನಗರದ ಸಿದ್ಧಾರ್ಥ, ಚಿತ್ರದುರ್ಗದ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ.

12

ಗೇಟ್‌ಗಳನ್ನು ಮುರಿದು ಒಳನುಗ್ಗಿದ ಅಂಧಾಭಿಮಾನಿಗಳು ಚೇರುಗಳನ್ನು ಎಸೆದು ಮಾರಾಟಕ್ಕಿಟ್ಟಿದ್ದ ತಂಪು ಪಾನೀಯಗಳ ಕ್ರೇಟ್‌ಗಳನ್ನು ಹೊತ್ತೊಯ್ದರೆ ಕೆಲವು ಚಿತ್ರಮಂದಿರಗಳಲ್ಲಿ ಗಾಜುಗಳನ್ನು ಪುಡಿಗಟ್ಟಿದರು. ಹೊಸಕೋಟೆ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲೂ ಸುದೀಪ್ ಅಭಿಮಾನಿಗಳು ಚಿತ್ರಮಂದಿರಗಳಿಗೆ ನುಗ್ಗಿ ಗಲಾಟೆ ಮಾಡಿದ್ದರು. ಎಲ್ಲೆಡೆಯೂ ಪೊಲೀಸರು ಧಾವಿಸಿ ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದರು. ಸಾಕಷ್ಟು ಗಲಾಟೆಯ ನಂತರ ಎಲ್ಲ ಚಿತ್ರಮಂದಿರಗಳಲ್ಲೂ ರನ್ನ ಚಿತ್ರ ಪ್ರದರ್ಶನಗೊಂಡಿತು. ಸುದೀಪ್ ಚಿತ್ರವಿರುವ ದೊಡ್ಡ ದೊಡ್ಡ ಕಟೌಟ್‌ಗಳಿಗೆ ಕೆಲವೆಡೆ ಕ್ಷೀರಾಭಿಷೇಕ ಬಡೆದರೆ, ಮತ್ತೆ ಅರಿಶಿನ, ಕುಂಕಮ, ಜೇನುತುಪ್ಪದಿಂದ ಅಭಿಷೇಕ ಮಾಡುತ್ತಿದ್ದು ಕಂಡುಬಂತು.

ಕಲ್ಲು ಹೊಡೆದು ದಾಂಧಲೆ
ಚಾಮರಾಜನಗರ: ನಗರದ ಸಿದ್ಧಾರ್ಥ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ ಸುದೀಪ್ ಅಭಿನಯದ ರನ್ನ ಚಿತ್ರ ಬಿಡುಗಡೆಯಾಗದ ಕಾರಣ ಅಭಿಮಾನಿಗಳು ಕಲ್ಲು ಹೊಡೆದು ದಾಂಧಲೆ ನಡೆಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾದ ಹಿನ್ನೆಲೆಯಲ್ಲಿ ಇಂದು ಸಿದ್ಧಾರ್ಥ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆ ಎಂದುಕೊಂಡು ಇಲ್ಲಿಗೆ ಆಗಮಿಸಿದ್ದವರು ಚಿತ್ರ ಬಿಡುಗಡೆಯಾಗದಿರುವುದನ್ನು ಕಂಡು ಆಕ್ರೋಶಗೊಂಡು ಚಿತ್ರಮಂದಿರಕ್ಕೆ ನುಗ್ಗಿ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ಸಿದ್ಧಾರ್ಥ ಚಿತ್ರಮಂದಿರದ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಚಿತ್ರ ಬಿಡುಗಡೆ ಮಾಡಿರಲಿಲ್ಲ.

Write A Comment