ಕರ್ನಾಟಕ

ಆಲಿಕಲ್ಲು ಮಳೆಗೆ ರಾಜ್ಯದಲ್ಲಿ 673.58 ಕೋಟಿ ನಷ್ಟ

Pinterest LinkedIn Tumblr

Alikallu-Rain

ಬೆಂಗಳೂರು, ಜೂ.2- ರಾಜ್ಯದಲ್ಲಿ ಏಪ್ರಿಲ್ ತಿಂಗಳಲ್ಲಿ ಬಿದ್ದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಆಗಿರುವ ಬೆಳೆ, ಆಸ್ತಿ-ಪಾಸ್ತಿ ಹಾನಿ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ. ರಾಜ್ಯದಲ್ಲಿ ಒಟ್ಟಾರೆ 673.58 ಕೋಟಿಯಷ್ಟು ಹಾನಿ ಸಂಭವಿಸಿದೆ. 95,540 ಹೆಕ್ಟೇರ್‌ನಲ್ಲಿ ಭತ್ತ, ಜೋಳ

ಮತ್ತಿತರ ಕೃಷಿ ಬೆಳೆ ಹಾನಿಗೀಡಾಗಿ 607.60 ಕೋಟಿಯಷ್ಟು ನಷ್ಟ ಉಂಟಾಗಿದೆ. ದ್ರಾಕ್ಷಿ, ಮಾವು, ದಾಳಿಂಬೆ ಸೇರಿದಂತೆ 9849 ಹೆಕ್ಟೇರ್‌ನ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 60.13 ಕೋಟಿ ರೂ. ನಷ್ಟ ಉಂಟಾಗಿದೆ.  36 ಲಕ್ಷ ಮೌಲ್ಯದಷ್ಟು ಜಾನುವಾರು ಮೃತಪಟ್ಟಿದ್ದರೆ, 5.37 ಕೋಟಿ ಮೌಲ್ಯದಷ್ಟು ಮನೆಗಳು ಹಾನಿಗೀಡಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ ವಿದ್ಯುತ್ ಕಂಬ ಮತ್ತು ತಂತಿಗಳು ಮುರಿದು 12 ಲಕ್ಷ ರೂ.ನಷ್ಟು ಹಾನಿಯಾಗಿದೆ.

ರಾಜ್ಯ ವಿಕೋಪ ಪರಿಹಾರ ಮಾರ್ಗಸೂಚಿ ಪ್ರಕಾರ, 140.86 ಕೋಟಿ ರೂ. ಪರಿಹಾರ ನೀಡಬೇಕಾಗಿದೆ. 119.94 ಕೋಟಿ ರೂ.ಗಳನ್ನು ವಿವಿಧ ಪರಿಹಾರಕ್ಕಾಗಿ ವೆಚ್ಚ ಮಾಡಲಾಗುತ್ತಿದೆ.  ರಾಜ್ಯಸರ್ಕಾರ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ.ನಂತೆ ಪ್ಯಾಕೇಜ್ ಘೋಷಿಸಿದೆ. ಈ ಘೋಷಣೆ ಪ್ರಕಾರ, ಪರಿಹಾರ ನೀಡಲು ಅಂದಾಜು 250.66 ಕೋಟಿ ರೂ. ಅಗತ್ಯವಿದೆ.  ಮನೆ, ಆಸ್ತಿ-ಪಾಸ್ತಿ, ಬೆಳೆ ಎಲ್ಲ ಸೇರಿ ಒಟ್ಟು 253.17 ಕೋಟಿ ಬೇಕಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರ 216.35 ಕೋಟಿ ರೂ.ಗಳನ್ನು ಪರಿಹಾರವಾಗಿ ಬಿಡುಗಡೆ ಮಾಡಿದೆ.
ಬೆಳೆಹಾನಿ, ಆಸ್ತಿ-ಪಾಸ್ತಿ ನಷ್ಟ, ಈಗ ನೀಡಿರುವ ಪರಿಹಾರಗಳನ್ನೊಳಗೊಂಡ ವರದಿಯನ್ನು ರಾಜ್ಯಸರ್ಕಾರ, ಕೇಂದ್ರ ಸರ್ಕಾರಕ್ಕೆ ರವಾನಿಸಿದೆ.  ಕಂದಾಯ ಇಲಾಖೆಯ ವಿಕೋಪ ನಿರ್ವಹಣಾ ಇಲಾಖೆ ವತಿಯಿಂದ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

Write A Comment