ಕರ್ನಾಟಕ

ಬಂಧಿತ ಇಸಿಸ್ ಶಂಕಿತ ಉಗ್ರ ಮೆಹದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಬೆಂಗಳೂರು ಸಿಸಿಬಿ ಪೊಲೀಸರು

Pinterest LinkedIn Tumblr

Mehdi

ಬೆಂಗಳೂರು: ಇಸಿಸ್ ಬೆಂಬಲಿಸಿ ಟ್ವೀಟ್ ಮಾಡಿ ಬೆಂಗಳೂರಿನಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಸೋಮವಾರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಾ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಬರೆದು, ಪ್ರಸ್ತುತ ಪೊಲೀಸರ ಅತಿಥಿಯಾಗಿರುವ ಮೆಹದಿ ವಿರುದ್ಧ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸುಮಾರು 36,986 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಉಗ್ರ ಸಂಘಟನೆ ಪರ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಮೆಹದಿಯನ್ನು 2014ರ ಡಿಸೆಂಬರ್ 13ರಂದು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮೆಹದಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು ಎಂಬ ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ, ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿಸಿಬಿಗೆ ಹಸಿರು ನಿಶಾನೆ ತೋರಿತ್ತು.

24 ವರ್ಷದ ಮೆಹ್ದಿ ಮಸ್ರೂರ್ ಬಿಸ್ವಾಸ್ ಮೂಲತಃ ಪಶ್ಚಿಮ ಬಂಗಾಳದ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ‘ಶಮಿ ವಿಟ್ನೆಸ್‌’ ಎಂಬ ಖಾತೆಯನ್ನು ತೆರೆದಿದ್ದ ಮೆಹ್ದಿ, ಇಸಿಸ್ ಉಗ್ರಗಾಮಿ ಸಂಘಟನೆಯನ್ನು ಬೆಂಬಲಿಸಿ ಬರೆಯುತ್ತಿದ್ದನು. ಅಲ್ಲದೆ ಹಲವು ಪ್ರಚೋದನಾತ್ಮಕ ಸಂದೇಶಗಳು ಮತ್ತು ಇರಾಕ್‌ನಲ್ಲಿ ಉಗ್ರರು ವಿದೇಶಿ ಪತ್ರಕರ್ತರನ್ನು ಅಪಹರಿಸಿ ಅವರ ತಲೆಕತ್ತರಿಸುವ ವಿಡಿಯೋಗಳನ್ನು ಖಾತೆಯಲ್ಲಿ ಹಾಕುತ್ತಿದ್ದನು.

Write A Comment