ರಾಷ್ಟ್ರೀಯ

“ಅಲ್ಪಸಂಖ್ಯಾತರ ವಿರುದ್ಧ ಸಂಘ ಪರಿವಾರದ ಹೇಳಿಕೆ ಅನಗತ್ಯವಾಗಿತ್ತು”: ಸಂಘ ಪರಿವಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ

Pinterest LinkedIn Tumblr

362404-narendramodi700

ನವದೆಹಲಿ: ಅಲ್ಪಸಂಖ್ಯಾತರ ವಿರುದ್ಧ ಸಂಘ ಪರಿವಾರದ ಮುಖಂಡರು ಹೇಳಿಕೆ ನೀಡುವ ಅಗತ್ಯವಿರಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಎನ್ ಡಿಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಯುಎನ್ ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ದೇಶದ ಜನರಿಗೆ ನಿಜಕ್ಕೂ ‘ಒಳ್ಳೆಯ ದಿನಗಳು ಬಂದಿವೆ’. ಆದರೆ ಕೆಲವು ಜನ ನಾವು ಮಾಡಿದ ಕೆಲಸದ ಬಗ್ಗೆ ಉಪೇಕ್ಷೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಅವರು, ತಮ್ಮ ಸರ್ಕಾರ ಯಾವುದೇ ನಿರ್ಧಿಷ್ಟ ಸಮುದಾಯದ ವಿರುದ್ಧ ಹಿಂಸೆ ಅಥವಾ ದ್ವೇಷವನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ವೇಳೆ ಸಂಘ ಪರಿವಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ಅಲ್ಪಸಂಖ್ಯಾತರ ವಿರುದ್ಧ ಸಂಘ ಪರಿವಾರದ ಮುಖಂಡರ ಹೇಳಿಕೆ ಅನಗತ್ಯವಾಗಿತ್ತು. ಕಾನುನಿನ ಮುಂದೆ ಎಲ್ಲಾ ಸಮುದಾಯದವರೂ ಸಮಾನರು ಎಂಬುದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕನಿಗೂ ನಮ್ಮ ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಮತ್ತು ಅದರಲ್ಲಿ ಯಾವುದೇ ರಾಜಿ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.

Write A Comment