ಕರ್ನಾಟಕ

ನನ್ನೊಂದಿಗೆ 35ಮಂದಿ ಶಾಸಕರಿದ್ದಾರೆ: ನಡಳ್ಳಿ ಹೊಸ ಬಾಂಬ್

Pinterest LinkedIn Tumblr

nadahalli

ಬೆಂಗಳೂರು, ಮೇ 23: ಕೆಪಿಸಿಸಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಎಚ್ಚರಿಕೆಯ ಹೊರತಾಗಿಯೂ ಶಾಸಕ ಎ.ಎಸ್.ಪಾಟೀಲ್ ನಡಳ್ಳಿ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆಯ ಹೋರಾಟಕ್ಕೆ ವೇದಿಕೆ ಸಿದ್ದಗೊಳಿಸುವುದಾಗಿ ಪ್ರಕಟಿಸಿದ್ದಾರೆ.

ಬೀದರ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಬಜೆಟ್‌ನಲ್ಲಿ ಪ್ರಕಟಿಸಿದ ಯಾವ ಯೋಜನೆಗಳು ಉತ್ತರ ಕರ್ನಾಟಕ ಭಾಗದಲ್ಲಿ ಜಾರಿಯಾಗಿಲ್ಲ ಎಂದು ಟೀಕಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಒಂದು ವರ್ಷಗಳ ವರೆಗೂ ಉತ್ತರ ಕರ್ನಾಟಕ ಭಾಗದಲ್ಲಿ ಜನ ಜಾಗೃತಿ ನಡೆಸಲಾಗುವುದು ನಂತರವೂ ರಾಜ್ಯ ಸರ್ಕಾರ ಎಚ್ಚೇತ್ತುಕೊಳ್ಳದೆ ಇದ್ದರೆ ಹೋರಾಟಕ್ಕೆ ವೇದಿಕೆಗೆ ಚಾಲನೆ ನೀಡಲಾಗುತ್ತದೆ ಎಂದಿದ್ದಾರೆ. ತಾವು ಶಾಸಕಾಂಗ ಪಕ್ಷದಿಂದ ಅಮಾನತುಗೊಂಡಿದ್ದರೂ 35 ಮಂದಿ ಶಾಸಕರು ನನಗೆ ಬೆಂಬಲವಾಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಉತ್ತರ ಕರ್ನಾಟಕ ಭಾಗದ 65 ಮಂದಿ ಶಾಸಕರು ಬೆಂಬಲ ನೀಡಿದ್ದರು. ಇದನ್ನು ಮರೆತು ಈ ಭಾಗದ ಅಭಿವೃದ್ಧಿಯನ್ನು ಮುಖ್ಯಮಂತ್ರಿ ನಿರ್ಲಕ್ಷ್ಯಿಸಿದ್ದಾರೆ ಎಂದು ನಡಳ್ಳಿ ಕಿಡಿಕಾರಿದರು.

ಉತ್ತರ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಜನ ಜಾಗೃತಿ ಮೂಡಿಸುವುದಾಗಿ ಅವರು ಹೇಳಿದರು. ಈ ನಡುವೆ ಪಕ್ಷದಿಂದ ನಡಳ್ಳಿ ಅವರನ್ನು ಉಚ್ಚಾಟಿಸುವ ಸಿದ್ದತೆಗಳು ನಡೆದಿವೆ. ಇದಕ್ಕೆ ಸಡ್ಡು ಹೊಡೆದಂತೆ ನಡಳ್ಳಿ ರಾಜ್ಯ ಸರ್ಕಾರದ ವಿರುದ್ಧವೇ ವಾಕ್ ಸಮರ ಆರಂಭಿಸಿದ್ದಾರೆ.

1 Comment

  1. Siddaramaiah has done very little for the improvement of Karnataka during his 2 years rule except some populist schemes which will be a burden on state’s ex checker without yielding desired results. None of the congressman have tried to strengthen their organization despite party loosing it’s ground in the state.

Write A Comment