ಕರ್ನಾಟಕ

ಸಾಲ ಮಾಡಿ ಶಿಕ್ಷಣ ಪಡೆದಿದ್ದು ಸಾರ್ಥಕ

Pinterest LinkedIn Tumblr

20bgm21

ಕೂಲಿ ಮಾಡಿ ಬದುಕಿನ ಬಂಡಿ ಎಳೆಯುವ ತಂದೆ, ಮನೆಯಲ್ಲಿದ್ದುಕೊಂಡೇ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ತಾಯಿಯಯನ್ನು ಹೊಂದಿರುವ ಗೋಕಾಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಯಲ್ಲಪ್ಪ ಕೋಲಾಕರ ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆಯುವ ಮೂಲಕ ಪೋಷಕರ ಕಣ್ಣಿನಲ್ಲಿ ಆನಂದ ಬಾಷ್ಪ ಹರಿಯುವಂತೆ ಮಾಡಿದ್ದಾನೆ.

ಬುಧವಾರ ಬೆಳಗಾವಿಯಲ್ಲಿ ನಡೆದ ರಾಣಿ ಚೆನ್ನಮ ವಿಶ್ವವಿದ್ಯಾಲದ ಮೂರನೇ ಘಟಿಕೋತ್ಸವದಲ್ಲಿ ಯಲ್ಲಪ್ಪ ಕೋಲಾಕರ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಕೂಲಿ ಮಾಡಿ ತಂದೆ ಗಳಿಸುವ ಅಲ್ಪ ಆದಾಯದಲ್ಲೇ ಬಡ ಕುಟುಂಬ ಸಾದಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ, ಯಲ್ಲಪ್ಪ ಓದಿ ಉತ್ತಮ ಸಾಧನೆ ಮಾಡಿದ್ದಾರೆ.

ಚಿನ್ನದ ಪದಕ ಸ್ವೀಕರಿಸಿದ ಬಳಿಕ ಮಾತನಾಡಿದ ಯಲ್ಲಪ್ಪ, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ನಾನು ಸಾಲ ಮಾಡಿಯಾದರೂ ಶಿಕ್ಷಣ ಪಡೆಯಬೇಕು ಎಂದು ಹಠದಿಂದ ದಿನಾಲು ತಪ್ಪದೇ ಕಾಲೇಜಿಗೆ ಹೋಗುತ್ತಿದ್ದೆ. ಈಗ ಅರ್ಥಶಾಸ್ತ್ರದಲ್ಲಿ ಮತ್ತು ವ್ಯವಹಾರ ಶಾಸ್ತ್ರದಲ್ಲಿ ಮೂರು ಚಿನ್ನದ ಪದಕಗಳು ಬಂದಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಚಿನ್ನದ ಪದಕ ದೊರೆತ ಬಳಿಕ ಇನ್ನಷ್ಟು ಓದುವ ಹಂಬಲವಿದ್ದು, ಪುಣೆಗೆ ತೆರಳಿ ಲೆಕ್ಕಪರಿಶೋಧಕನಾಗಲು ಬಯಸಿದ್ದೆ. ಆದರೂ ಹಣಕಾಸಿನ ಕೊರೆಯಿದೆ. ಅದಕ್ಕಾಗಿ ಓದು ಸಾಧ್ಯವಾಗುವುದೋ ಇಲ್ಲ ಎಂಬ ಆತಂಕ ನನ್ನನ್ನು ಕಾಡುತ್ತಿದೆ ಎಂದು ಯಲ್ಲಪ್ಪ ಕೋಲಕಾರ ಅವರು ತಿಳಿಸಿದ್ದಾರೆ.

Write A Comment