ಕರ್ನಾಟಕ

ಬೆಂಗಳೂರಿನ ಕೆರೆಯಲ್ಲಿ ಮತ್ತೆ ಬೆಂಕಿ

Pinterest LinkedIn Tumblr

pvec17May15Yamalur-Ammanike

ಬೆಂಗಳೂರು (ಪಿಟಿಐ): ಮಿತಿ ಮೀರಿದ ರಾಸಾಯನಿಕ ತ್ಯಾಜ್ಯದಿಂದ ಕಲುಷಿತಗೊಂಡಿರುವ ಯಮಲೂರಿನ ಅಮಾನಿ ಕೆರೆಯಲ್ಲಿನ ನೊರೆಗೆ ಮತ್ತೆ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಸಿದೆ.

ವರ್ತೂರಿನಲ್ಲಿರುವ ಈ ಕೆರೆಯಲ್ಲಿ ಸೋಮವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತ್ತು. ಕಳೆದೊಂದು ವಾರದಲ್ಲಿ ಬೆಂಕಿ ಕಾಣಿಸಿದ್ದು ಇದು ಮೂರನೇ ಬಾರಿ. ಮೇ 16ರ ರಾತ್ರಿ ಹಾಗೂ ಮೇ 17 ರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿತ್ತು.

‘ಕಳೆದ ರಾತ್ರಿಯಿಂದ ಬೆಂಕಿ ಕಾಣಿಸುತ್ತಿದೆ. ಮಾಧ್ಯಮಗಳು ಮಾತ್ರವೇ ಇದನ್ನು ವರದಿ ಮಾಡುತ್ತಿವೆ. ಆದರೆ ಯಾವುದೇ ಸರ್ಕಾರಿ ಅಧಿಕಾರಿಗಳು ಈವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ’ ಎಂದು ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಏನು ಮಾಡುವುದೋ ತಿಳಿಯುತ್ತಿಲ್ಲ. ಈ ಸಂಬಂಧ ಅಧಿಕಾರಿಗಳು ಕೆಲವು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ನಾವು ನಾಳೆ ಪ್ರತಿಭಟನೆ ನಡೆಸಲು ನಿರ್ಧಿರಿಸಿದ್ದೇವೆ’ ಎಂದು ಸ್ಥಳೀಯ ಮತ್ತೊಬ್ಬ ನಿವಾಸಿ ಪ್ರತಿಕ್ರಿಯಿಸಿದ್ದಾರೆ.

ಕಾರ್ಖಾನೆಗಳು ಹಾಗೂ ಮನೆಗಳಿಂದ ಹೊರಬರುವ ಹೈಡ್ರೋಕಾರ್ಬನ್ ಮಿಶ್ರಿತ ತ್ಯಾಜ್ಯವೇ ಬೆಂಕಿಗೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Write A Comment