ಕರ್ನಾಟಕ

ಚುಂಚಿ ಫಾಲ್ಸ್‌ನಲ್ಲಿ ಕೊಚ್ಚಿ ಹೋದ ಇಬ್ಬರು ಸಹೋದರಿಯರು: ದೇಹಗಳಿಗಾಗಿ ಶೋಧಕಾರ್ಯ

Pinterest LinkedIn Tumblr

pals

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಚುಂಚಿ ಫಾಲ್ಸ್‌ಗೆ ಪ್ರವಾಸಕ್ಕೆಂದು ಆಗಮಿಸಿದ್ದ ಇಬ್ಬರು ಯುವತಿಯರು ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿರುವ ಧಾರುಣ ಘಟನೆ ಇಲ್ಲಿ ನಿನ್ನೆ ನಡೆದಿದೆ.

ಶಾಲಿನಿ ಮತ್ತು ಮಾಲಿನಿ ಎಂಬ ಇಬ್ಬರು ಸಹೋದರಿಯರು ನೀರಿನಲ್ಲಿ ಕೊಚ್ಚಿದೋದ ದುರ್ಧೈವಿಗಳಾಗಿದ್ದು, ಇವರು ತಮ್ಮ ಕುಟುಂಬದ ಇತರೆ ಸದಸ್ಯರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಧುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಫಾಲ್ಸ್‌ಗೆ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಇಲ್ಲಿನ ಹಾರೋಬೆಲೆ ಜಲಾಶಯದಲ್ಲಿ ನೀರಿನ ಸಂಗ್ರಹಣಾ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಆ ನೀರನ್ನು ಚುಂಚಿಫಾಲ್ಸ್‌ಗೆ ಹರಿಬಿಡಲಾಗಿತ್ತು. ಇದರಿಂದ ನೀರಿನ ಹರಿಯುವ ಮಟ್ಟ ಏಕಾಏಕಿ ಏರಿದೆ. ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಸಹೋದರಿಯರು ಕೊಚ್ಚಿಹೋಗಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ನೀರಿನಲ್ಲಿ ಕೊಚ್ಚಿಹೋದ ಸಹೋದರಿಯರ ದೇಹಗಳಿಗಾಗಿ ಶೋಧಕಾರ್ಯ ನಡೆಯುತ್ತಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಚರಣೆ ಮುಂದುವರಿಸಿದ್ದಾರೆ. ಈ ಘಟನೆ ಬಳಿಕ ಬೆಂಗಳೂರಿನಿಂದ ಹುಟ್ಟುಹಬ್ಬ ಆಚರಣೆಗೆಂದು ಬಂದಿದ್ದ 6 ಮಂದಿ ಇದ್ದ ಯುವಕರ ತಂಡವೂ ಕೂಡ ನೀರಿನಲ್ಲಿ ಸಿಲುಕಿಕೊಂಡಿತ್ತು ಎನ್ನಲಾಗಿದ್ದು, ಆ ಎಲ್ಲರನ್ನೂ ಕೂಡ ಅಗ್ನಿಶಾಮಕ ಸಿಬ್ಬಂದಿಗಳೇ ನಿನ್ನೆ ರಾತ್ರಿ ಒಂದು ಗಂಟೆ ವೇಳೆಯಲ್ಲಿ ರಕ್ಷಿಸಲಾಗಿದೆ.

Write A Comment