ಕರ್ನಾಟಕ

SSLC ಪರೀಕ್ಷೆಯಲ್ಲಿ ಶೂನ್ಯ ಸಂಪಾದಿಸಿದ ಶಾಲೆಗಳ ಅನುದಾನಕ್ಕೆ ಕತ್ತರಿ ಹಾಕಲು ತೀರ್ಮಾನಿಸಿದ ಕೆಇಎ

Pinterest LinkedIn Tumblr

Results

ಬೆಂಗಳೂರು, ಮೇ 15: ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಖಾಸಗಿ ಅನುದಾನ ಶಾಲೆಗಳಿಗೆ ರಾಜ್ಯ ಸರ್ಕಾರ ಮೂಗುದಾರ ಹಾಕಲು ಮುಂದಾಗಿದೆ. ರಾಜ್ಯದಲ್ಲಿ ಖಾಸಗಿ ಅನುದಾನ ಹಾಗೂ ಅನುದಾನ ರಹಿತ ಸೇರಿದಂತೆ ಒಟ್ಟು 36 ಪ್ರೌಢಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಇಎ) ಶೂನ್ಯ ಸಂಪಾದನೆ ಮಾಡಿರುವ ಶಾಲೆಗಳಿಗೆ ನೀಡುತ್ತಿದ್ದ ಅನುದಾನಕ್ಕೆ ಕೊಕ್ಕೆ ಹಾಕಲು ತೀರ್ಮಾನಿಸಿದೆ.

ಈಗಾಗಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಶೂನ್ಯ ಫಲಿತಾಂಶ ಬಂಧಿರುವ ಶಾಲೆಗಳಿಗೆ ನೋಟಿಸ್ ನೀಡಿದೆ. ಯಾವ ಕಾರಣಕ್ಕಾಗಿ ಫಲಿತಾಂಶ ಹಿನ್ನಡೆ ಕಂಡಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಲಾಗಿದೆ. ಆಡಳಿತ ಮಂಡಳಿ ನೋಟಿಸ್‌ಗೆ ಉತ್ತರ ನೀಡಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಮಂಡಳಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ನೋಟಿಸ್‌ಗೆ ನೀಡುವ ಉತ್ತರ ತೃಪ್ತಿಕರವಾಗಿದ್ದರೆ ಅಂತಹ ಶಾಲೆಗಳ ಮೇಲೆ ಯಾವುದೇ ಶಿಸ್ತುಕ್ರಮ ಜರುಗಿಸುವುದಿಲ್ಲ. ಒಂದು ವೇಳೆ ಅಸಮರ್ಪಕ ಉತ್ತರ ಇದ್ದರೆ ಸರ್ಕಾರದ ವತಿಯಿಂದ ನೀಡುತ್ತಿದ್ದ ಅನುದಾನವನ್ನು ಕಡಿತ ಮಾಡುವುದಾಗಿ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬರಬಾರದೆಂಬುದು ಸರ್ಕಾರದ ಸದುದ್ದೇಶ. ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದಾಗ ಅನುದಾನ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಇಷ್ಟು ಕಳಪೆ ಫಲಿತಾಂಶ ಬರಲು ಕಾರಣವೇನು ಎಂದು ಮಂಡಳಿ ಪ್ರಶ್ನೆ ಮಾಡಿದೆ.

ಅರ್ಜಿ ಹಿಂದಕ್ಕೆ:
ಯಾವ ಯಾವ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆಯೋ ಅಂತಹ ಕಡೆ ಎಸ್‌ಎಸ್‌ಎಲ್‌ಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸದಂತೆ ಮಂಡಳಿ ಅರ್ಜಿಗಳನ್ನು ಹಿಂಪಡೆಯಲು ಮುಂದಾಗಿದೆ. ಅನುದಾನ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಪೋಷಕರು ಪ್ರಸಕ್ತ ವರ್ಷದಿಂದಲೇ ದಾಖಲಾತಿ ಮಾಡಬಾರದು. ಆಡಳಿತ ಮಂಡಳಿ ನೋಟಿಸ್‌ಗೆ ನೀಡುವ ಉತ್ತರದ ನಂತರ ಸರ್ಕಾರ ತನ್ನ ನಿಲುವು ಪ್ರಕಟಿಸುವವರೆಗೂ ಮಕ್ಕಳನ್ನು ದಾಖಲಿಸದಂತೆ ಕೋರಲಾಗಿದೆ.

ಕಳಪೆ ಶಾಲೆಗಳು:
ರಾಜ್ಯದ ಒಟ್ಟು 36 ಶಾಲೆಗಳಲ್ಲಿ ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ. ಅವುಗಳ ವಿವರ ಈ ಕೆಳಕಂಡಂತಿದೆ: ಬೆಂಗಳೂರು ಉತ್ತರ- ಬಿಬಿಎಂಪಿ ವಲಯದ ಶಾಲೆಗಳು (ದಯಾನಂದ ನಗರ್), ಶ್ರೀ ಮಂಜುನಾಥಸ್ವಾಮಿ ಪ್ರೌಢಶಾಲೆ (ನಾಗಶೆಟ್ಟಿಹಳ್ಳಿ), ಯಮ್ಮನುಲ್ ಎಚ್.ಎಸ್.ರಾಮಸ್ವಾಮಿ ಪಾಳ್ಯ, ಕಾರ್ಡಿಯಲ್ ಇಂಡಿಯನ್ ಪ್ರೌಢಶಾಲೆ (ಇಂದಿರಾನಗರ).
ಬೆಂಗಳೂರು ದಕ್ಷಿಣ: ಶ್ರೀ ಗುರುರಾಜ ಎಚ್.ಎಸ್.(ಭೈರಸಂದ್ರ), ವಿಜ್ಡಮ್ ಎಚ್.ಎಸ್. (ಜೆಜೆಆರ್ ನಗರ), ರೋಹಿಣಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ (ನಾಯಂಡನಹಳ್ಳಿ).
ಚಿಕ್ಕಬಳ್ಳಾಪುರ: ಕೆಂಪೇಗೌಡ ಪ್ರೌಢಶಾಲೆ.
ತುಮಕೂರು: ಗುಬ್ಬಿ ತಾಲೂಕಿನ ದೇವಿ ಕೊಲ್ಲಾರಮ್ಮ ಗ್ರಾಮೀಣ ಪ್ರೌಢಶಾಲೆ
ಗದಗ: ರೋಣಾ ತಾಲೂಕಿನ ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆ
ಧಾರವಾಡ: ಕರ್ನಾಟಕ ತಮಿಳು ಮಾಧ್ಯಮ ಪ್ರೌಢಶಾಲೆ, ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ, ಶ್ರೀ ಬಿ.ಸಿ.ದೇಶಪಾಂಡೆ ಪ್ರೌಢಶಾಲೆ, ಅಣ್ಣಿಗೇರಿ.
ಚಿಕ್ಕೋಡಿ: ಲಟ್ಟೆ ಎಜುಕೇಷನ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ
ಬೆಳಗಾವಿ: ಖಾನಾಪುರದ ಮರಾಠ ಮಂಡಳ ಪ್ರೌಢಶಾಲೆ
ವಿಜಯಪುರ: ಶ್ರೀ ಶಿವಕುಮಾರ ಎಚ್.ಎಸ್. ಬಾಲಕಿಯರ ಪ್ರೌಢಶಾಲೆ, ಮಾನಸ ಗಂಗೋತ್ರಿ ಕನ್ನಡ ಮಾಧ್ಯಮ ಶಾಲೆ
ಕಲಬುರಗಿ: ಬಿ.ಶ್ಯಾಮಸುಂದರ ಸ್ಮಾರಕ ಪ್ರೌಢಶಾಲೆ, ಕಡಕೋಳ ಮಡಿವಾಳೇಶ್ವರ ಪ್ರೌಢಶಾಲೆ, ಕೆಆರ್‌ಸಿ ಬಾಲಕಿಯರ ಪ್ರೌಢಶಾಲೆ, ಅರ್ಚನಾ ಪ್ರೌಢಶಾಲೆ, ಚಕ್ರವರ್ತಿ ಪ್ರೌಢಶಾಲೆ, ಕನ್ನಡ ಮಾಧ್ಯಮ ಶಾಲೆ, ಶ್ರೀ ಗಂಗಾಧರ ನಮೋಶಿ ಪ್ರೌಢಶಾಲೆ, ಆದರ್ಶ ಪ್ರೌಢಶಾಲೆ, ಶ್ರೀ ವಿಶ್ವಜ್ಯೋತಿ ಪ್ರೌಢಶಾಲೆ
ಕೊಪ್ಪಳ: ಶ್ರೀ ಮಂಜುಶ್ರೀ ಗ್ರಾಮೀಣ ಪ್ರೌಢಶಾಲೆ
ರಾಯಚೂರು: ಇಕ್ರ ಕನ್ನಡ ಮಾಧ್ಯಮ ಪ್ರೌಢಶಾಲೆ
ಬೀದರ್: ಶ್ರೀ ಮಹಾತ್ಮಗಾಂಧಿ ಪ್ರೌಢಶಾಲೆ, ಶ್ರೀ ಶರಣ ಬಸವೇಶ್ವರ ಪ್ರೌಢಶಾಲೆ, ಶ್ರೀ ಜಗದೇವಿ ತ್ಯಾಗಿ ಪ್ರೌಢಶಾಲೆ, ಜೈದುರ್ಗ ಮಾತಾ ವಸತಿ ಪ್ರೌಢಶಾಲೆ, ಶ್ರೀ ದೀನಧರ್ಮ ಕೇಶವ ಪ್ರೌಢಶಾಲೆ, ಲಿಟ್ಲ್‌ಫ್ಲವರ್ ಆಂಗ್ಲ ಮಾಧ್ಯಮ ಶಾಲೆ

Write A Comment