ಕರ್ನಾಟಕ

ಜಯಾ ನಿರ್ದೋಷಿ ಎಂದು ಘೋಷಿಸಿದ್ದೇಕೆ?: ಹೈಕೋರ್ಟ್ ತೀರ್ಪಿನ ಮುಖ್ಯಾಂಶಗಳು

Pinterest LinkedIn Tumblr

jayalalitha

ಬೆಂಗಳೂರು:  ಅಕ್ರಮ ಆಸ್ತಿ ಪ್ರಕರಣಕ್ಕೆ  ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ವಿರುದ್ಧ ಅಧೀನ ನ್ಯಾಯಾಲಯ ನೀಡಿದ್ದ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರುಪಾಯಿ ದಂಡ ಆದೇಶವ್ನನು ಹೈಕೋರ್ಟ್ ಏಕಸದಸ್ಯ ಪೀಠ ರದ್ದು ಪಡಿಸಿ, ಜಯಾ ನಿರ್ದೋಷಿ ಎಂಬ ತೀರ್ಪು ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ಸಿ. ಆರ್. ಕುಮಾರಸ್ವಾಮಿ ಅವರ ವಿಶೇಷ ಏಕ ಸದಸ್ಯ ಪೀಠದ ಕೋರ್ಟ್ ಹಾಲ್ 14ರಲ್ಲಿ ಸೋಮವಾರ ಬೆಳಗ್ಗೆ 11.10ಕ್ಕೆ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

ತೀರ್ಪಿನಲ್ಲಿ ಏನಿದೆ?

ಈ ಎಲ್ಲ ಸಂದರ್ಭಗಳನ್ನು ಪರಿಗಣಿಸಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಕಾನೂನು ರೀತಿಯಲ್ಲಿ  ಜಯಲಲಿತಾ ನಿರ್ದೋಷಿ.
ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬುದು ಸರಿಯಲ್ಲ, ಅವರಲ್ಲಿ ಇರುವ ಅಕ್ರಮ ಆಸ್ತಿ ಶೇ. 10ಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ಇದು ಅಕ್ರಮ ಗಳಿಕೆ ಎಂದು ಹೇಳಲಾಗುವುದಿಲ್ಲ.
ಆಂಧ್ರಪ್ರದೇಶ ಸರ್ಕಾರ ಹೊರಡಿಸಿದ ಸುತ್ತೋಲೆ ಪ್ರಕಾರ, ನಿಯಮಿತ ಆಸ್ತಿಯಿಂದ ಶೇ. 20 ಹೆಚ್ಚು ಆಸ್ತಿಯಿದ್ದರೂ ಅದು ಅನುಜ್ಞಾರ್ಹವಾಗಿದೆ.
ಫಿರ್ಯಾದುದಾರರು ಜಯಾ ಅವರ ಕಂಪನಿ ಹಾಗೂ ಇತರ ವಸ್ತುಗಳ ಮೌಲ್ಯಗಳನ್ನು ಎಲ್ಲವನ್ನೂ ಒಟ್ಟಿಗೆ ಸೇರಿಸಿ ಅಕ್ರಮ ಗಳಿಕೆಯ ಆರೋಪ ಹೊರಿಸಿದ್ದಾರೆ. ಹೇಗೆಂದರೆ ನಿರ್ಮಾಣ ವೆಚ್ಚ  ರು. 27,79,88,945,  ಮದುವೆಯ ಖರ್ಚು ರು. 6,45,04,222, ಆಸ್ತಿ ರು. 66,44,73,573 ಹೀಗೆ ಎಲ್ಲವನ್ನೂ ಒಟ್ಟಿಗೆ ಸೇರಿಸಿದ್ದಾರೆ.
ಇದರಲ್ಲಿ ನಾವು ನಿರ್ಮಾಣದ ವೆಚ್ಚ , ಮದುವೆಯ ಖರ್ಚು ಎಲ್ಲವನ್ನೂ ಕಳೆದರೆ ಉಳಿದ ಆಸ್ತಿಯ ಮೌಲ್ಯ ರು. 37,59,02,466.  ಆರೋಪಿಯ ಒಟ್ಟ ಆದಾಯ, ಆಸ್ತಿ ಹಾಗೂ ಕಂಪನಿಗಳ ಆದಾಯ ಒಟ್ಟು ಸೇರಿಸಿದರೆ ರು.34,76,65,654 ಆಗುತ್ತದೆ. ಅಂದರೆ, ಆದಾಯ ಮಿತಿಯಿಂದ ಇದು ರು. 2,82,36,812 ಹೆಚ್ಚಾಗಿದ್ದು, ಇದರ ಶೇಕಡಾವಾರು 8.12 ಆಗಿದೆ. ಹಾಗಾದರೆ ಇದು ಅಕ್ರಮ ಗಳಿಕೆ ಅಲ್ಲ.

Write A Comment