ಕರ್ನಾಟಕ

ಅಮ್ಮನ ದೇವಸ್ಥಾನ ಕಟ್ಟಿಸಿ ಪೂಜೆ ಸಲ್ಲಿಸುತ್ತಿರುವ ಪುತ್ರ

Pinterest LinkedIn Tumblr

mo

ಹಾವೇರಿ: ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎನ್ನುತ್ತಾರೆ. ಹೆತ್ತು, ಹೊತ್ತು ಜೀವನ ರೂಪಿಸಿದ ಅಮ್ಮ ದೇವರಿಗಿಂತಲೂ ಮಿಗಿಲೆನಿಸುತ್ತಾಳೆ. ತಾಯಿಯನ್ನು ಪ್ರೀತಿಸುವುದು, ಆರಾಧಿಸುವುದು ಸಾಮಾನ್ಯ. ಆದರೆ ಹಾವೇರಿಯ ಈ ಪುತ್ರರು ತಮ್ಮ ಹೆತ್ತವ್ವನಿಗಾಗಿ ದೇವಸ್ಥಾನವನ್ನೇ ಕಟ್ಟಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳೂರು ತಾಂಡಾದ ನಿವಾಸಿ ಅಣ್ಣಪ್ಪ ತಮ್ಮ ತಾಯಿಗಾಗಿ ದೇವಸ್ಥಾನ ಕಟ್ಟಿಸಿದ್ದಾರೆ. 2010ರಲ್ಲಿ ತಮ್ಮ ತಾಯಿ ಹೇಮಲವ್ವ ಲಮಾಣಿಯವರ ಶಿಲಾಮೂರ್ತಿ ಪ್ರತಿಷ್ಠಾಪಿಸಿರುವ ಅವರು ಪ್ರತಿನಿತ್ಯ ಅದಕ್ಕೆ ಪೂಜೆ ಸಲ್ಲಿಸುತ್ತಾರೆ.

ಅಣ್ಣಪ್ಪ ಅವರಿಗೆ ಮೂವರು ಹಿರಿಯ ಸಹೋದರರಿದ್ದು, ಅವರೆಲ್ಲ ಸ್ವಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ. ಕೊನೆಯವರಾದ ಅಣ್ಣಪ್ಪ ಲಮಾಣಿ ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದ ಭವನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಹೆತ್ತ ತಾಯಿಯನ್ನು ಅಪಾರವಾಗಿ ಗೌರವಿಸುವ ಸಹೋದರರು ಆಕೆಗಾಗಿ ದೇವಸ್ಥಾನವನ್ನು ಕಟ್ಟಿಸಿ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಾರೆ.  ಸಹೋದರರ ಈ ದೊಡ್ಡಗುಣವನ್ನು ಕಂಡು ಗ್ರಾಮಸ್ಥರು ಸಹ ಅಭಿಮಾನ ವ್ಯಕ್ತಪಡಿಸುತ್ತಾರೆ.

ನವರಾತ್ರಿ ಸಮಯದಲ್ಲಿ ತಾಯಿಗೆ ವಿಶೇಷ ಪೂಜೆಯನ್ನು ಆಯೋಜಿಸಲಾಗುತ್ತದೆ.

ಹೆತ್ತವರನ್ನು ಕಸದಂತೆ ಬೀದಗೆಸೆಯುವ ಹೊಣೆಗೇಡಿ ಮಕ್ಕಳ ನಡುವೆ ಅಣ್ಣಪ್ಪ ಮತ್ತು ಅವರ ಸಹೋದರರು ವಿಭಿನ್ನವಾಗಿ ನಿಲ್ಲುತ್ತಾರೆ.

Write A Comment