ಕರ್ನಾಟಕ

ಶಾರ್ಟ್‌ಸರ್ಕ್ಯೂಟ್; ಕಾರ್ಖಾನೆಗೆ ಬೆಂಕಿ : ಕೋಟ್ಯಂತರ ಮೌಲ್ಯದ ಮಾಲು ಭಸ್ಮ

Pinterest LinkedIn Tumblr

Fire-accidentt

ದೊಡ್ಡಬಳ್ಳಾಪುರ,ಮೇ.2: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಅಪೆರಲ್ ಪಾರ್ಕ್‌ನ ಕಾರ್ಖಾನೆಯೊಂದರಲ್ಲಿ ಶಾರ್ಟ್‌ಸರ್ಕ್ಯೂಟ್ ಸಂಭವಿಸಿ ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ. ಕಾರ್ಮಿಕ ದಿನಾಚರಣೆ ಪ್ರಯುಕ್ತ ನಿನ್ನೆ ಎವರ್‌ಬ್ಲೂ ಕಾರ್ಖಾನೆಗೆ ರಜೆ ಇತ್ತು. ಇಂದು ಬೆಳಗ್ಗೆ ಮೊದಲ ಷಿಫ್ಟ್‌ಗೆ ಬಂದ ಕಾರ್ಮಿಕರು ಮೆಷಿನ್‌ಗಳನ್ನು ಸ್ಟಾರ್ಟ್ ಮಾಡಿದಾಗ ಶಾರ್ಟ್‌ಸರ್ಕ್ಯೂಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ.

ಅಗ್ನಿಶಾಮಕದಳ ಘಟನಾಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಭಾಗಶಃ ಕಾರ್ಖಾನೆ ಬೆಂಕಿಗೆ ಆಹುತಿಯಾಗಿತ್ತು. ಕಾರ್ಖಾನೆಯಲ್ಲಿ ಜೀನ್ಸ್ ಬಟ್ಟೆ ತಯಾರಿಸಲಾಗುತ್ತಿದ್ದು,ವಿದೇಶಗಳಿಗೆ ಎಕ್ಸ್‌ಪೋರ್ಟ್ ಮಾಡಲು ಉತ್ಪಾದಿಸಿ ದಾಸ್ತಾನು ಮಾಡಲಾಗಿದ್ದ ಕೋಟ್ಯಂತರ ರೂ. ಮೌಲ್ಯದ ಮಾಲು ಬೆಂಕಿಗೆ ಆಹುತಿಯಾಗಿದೆ. ಟ್ಯಾಂಕರ್‌ಗಳ ಮೂಲಕ ನೀರು ತಂದು ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟರು. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಹ ಬೆಂಕಿ ನಂದಿಸಲು ಶತಪ್ರಯತ್ನ ನಡೆಸಿದರು. ಈ ವೇಳೆ ಸಿಬ್ಬಂದಿ ಚಿನ್ನಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Write A Comment